ಮದರಸಾಗಳಲ್ಲಿ ಯೋಗ ದಿನ ಆಚರಿಸಬೇಕು : ಯೋಗಿ ಆದಿತ್ಯನಾಥ್
ಅನುದಾನ ರಹಿತ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಎಲ್ಲಾ ಮದರಸಾಗಳಲ್ಲಿ ಕಡ್ಡಾಯವಾಗಿ ಯೋಗ ನಡೆಸಬೇಕು ಆದೇಶ ಪ್ರಕಟಿಸಿತ್ತು.
ಈ ಆದೇಶವನ್ನು ಸೋಮವಾರ ಹೊರಡಿಸಲಾಗಿತ್ತು. ಆದೇಶದ ಪ್ರಕಾರ, ಮದರಸಾಗಳಲ್ಲಿ ಓದುತ್ತಿರುವ ಮಕ್ಕಳಿಗೆ ಯೋಗದ ಜ್ಞಾನವನ್ನು ನೀಡಲು ಜೂನ್ 21 ರಂದು ರಾಜ್ಯದ ಎಲ್ಲ ಮದರಸಾಗಳಲ್ಲಿ ಯೋಗ ಆಚರಿಸಬೇಕು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ಅಗತ್ಯವಿರುವ ವ್ಯವಸ್ಥೆಗಳನ್ನು ನೋಡಿ ಸಹಕರಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.