ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಆಸ್ತಿ ವಿವರ ಘೋಷಿಸುವಂತೆ ಕಟ್ಟಪ್ಪಣೆ ಮಾಡಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾತ್, ಇದೀಗ, ಗೋಹತ್ಯೆ ವಿರುದ್ಧ ಸಮರ ಸಾರಿದ್ದಾರೆ.
ಗೋಹತ್ಯೆ ಮತ್ತು ಅಕ್ರಮ ಗೋವುಗಳ ಸಾಗಣೆಯನ್ನ ಸಹಿಸಲು ಸಾಧ್ಯವಿಲ್ಲ ಎಂದಿರುವ ಆದಿತ್ಯನಾತ್, ಅಕ್ರಮ ಕಸಾಯಿಖಾನೆಗಳ ನಾಮಾವಶೇಷ ಮಾಡುವಂತೆ ಪೊಲಿಸರಿಗೆ ಆದೇಶಿಸಿದ್ದಾರೆ. ಈ ಬಗ್ಗೆ ಕ್ರಿಯಾಯೋಜನೆ ರೂಪಿಸುವಂತೆ ಖಡಕ್ ಆದೇಶ ನೀಡಿದ್ದಾರೆ. ಆದರೆ, ಉತ್ತರಪ್ರದೇಶದಲ್ಲಿ ಹಲವು ಪರವಾನಗಿ ಪಡೆದಿರುವ ಕಸಾಯಿಖಾನೆಗಳಿದ್ದು, ಅವುಗಳನ್ನ ಯೋಗಿ ಹೇಗೆ ತೊಡೆದುಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಇದೇವೇಳೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೂ ಆಂಟಿ-ರೋಮಿಯೋ ಸ್ಕ್ವಾಡ್ ರಚನೆಗೂ ಪೊಲೀಸರಿಗೆ ಸೂಚಿಸಿದ್ದಾರೆ.