ಉನ್ನತ ಅಧಿಕಾರಿಗಳಿಗೆ ಬುಲಾವ್ ನೀಡಿದ ಯೋಗಿ

ಶನಿವಾರ, 9 ನವೆಂಬರ್ 2019 (09:35 IST)
ಉತ್ತರ ಪ್ರದೇಶ: ಅಯೋಧ್ಯೆ ತೀರ್ಪಿನ ಕುರಿತು ಏನಾಗಬಹುದು ಎಂದು ತಿಳಿಯಲು ಸುಪ್ರೀಕೋರ್ಟ್ ‘ಪಂಚ’ ಪೀಠದತ್ತ ಇಡೀ ದೇಶದ ಚಿತ್ತವೇ ನೆಟ್ಟಿದೆ.ಉತ್ತರಪ್ರದೇಶದಲ್ಲೂ ಬಿಗಿ ಬಂದೋಬಸ್ತ್ ಗಳನ್ನು ಮಾಡಲಾಗಿದೆ. ಉನ್ನತ ಪೊಲೀಸ್ ಅಧಿಕಾರಿಗಳಿಗೆ ಯೋಗಿ ಆದಿತ್ಯನಾಥ್ ಬುಲಾವ್ ನೀಡಿದ್ದಾರೆ.
ಸೂಕ್ತ ಭದ್ತಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವುದಕ್ಕಾಗಿ  ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಯೋಗಿ ಸರ್ಕಾರದ 31 ಸೂಕ್ಷ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ತಾತ್ಕಾಲಿಕ ಜೈಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ