ನವದೆಹಲಿ: ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಯಿತು. ಬಂದವರಿಗೆಲ್ಲಾ ಭರಪೂರ ಭೋಜನ ನೀಡಿದ್ದಾಯ್ತು. ನಮ್ಮ ಅಂತಸ್ತಿನ ಪ್ರದರ್ಶನವೂ ಆಯಿತು. ಇನ್ನೇನು ಬೇಕು? ಹಾಗಂತ ಸುಮ್ಮನಿದ್ದರೆ ಇನ್ನು ನಡೆಯದು. ಮದುವೆಯಾದ ತಕ್ಷಣ ಒಂದು ಕೆಲಸ ಮಾಡಲೇಬೇಕು.
ಹೌದು. ಭಾರತದ ಕಾನೂನು ಆಯೋಗ ಮದುವೆಯಾದ ಸತಿ ಪತಿಗಳು ಇನ್ನು ಮುಂದೆ ಮದುವೆಯಾದ 30 ದಿನಗಳೊಳಗೆ ವಿವಾಹ ನೋಂದಣಿ ಕಡ್ಡಾಯವಾಗಿ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಇದಕ್ಕೆ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ.
ಅಂದರೆ ಕಾನೂನು ಆಯೋಗ ಹೇಳಿದ ಪ್ರಕಾರ ಮದುವೆಯಾದ 30 ದಿನಗಳೊಳಗೆ ಕಡ್ಡಾಯವಾಗಿ ಮದುವೆ ನೋಂದಣಿ ಮಾಡಬೇಕು. ತಪ್ಪಿದಲ್ಲಿ ದಿನದ ಲೆಕ್ಕದಲ್ಲಿ ದಂಡ ತೆರಬೇಕಾಗಬಹದು ಎಂದು ಎಚ್ಚರಿಸಿದೆ. ಒಂದು ವೇಳೆ ವಿವಾಹ ನೋಂದಣಿ ಮಾಡಿಸದಿದ್ದರೆ, ಮ್ಯಾರೇಜ್ ಸರ್ಟಿಫಿಕೇಟ್ ಒದಗಿಸಿದರೆ ಸಿಗುವ ಎಲ್ಲಾ ಸವಲತ್ತುಗಳಿಂದ ವಂಚಿತರಾಗಲಿದ್ದೀರಿ ಎಂದು ಆಯೋಗ ಎಚ್ಚರಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ