ಯೋಗಿ ಸರ್ಕಾರದಿಂದ ಯುವಕರು ಉದ್ಯೋಗದಿಂದ ವಂಚಿತ : ಪ್ರಿಯಾಂಕಾ ಗಾಂಧಿ
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 16.5 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಹಾಗೂ ನಾಲ್ಕು ಕೋಟಿ ಜನರು ಉದ್ಯೋಗದ ಭರವಸೆಯನ್ನು ಕಳೆದುಕೊಂಡಿದ್ದಾರೆ.
ಯೋಗಿ ಸರ್ಕಾರವು ಈ 5 ವರ್ಷದಲ್ಲಿ ಬಜೆಟ್ನಲ್ಲಿ ಶಿಕ್ಷಣಕ್ಕೆ ಅಧಿಕ ಒತ್ತನ್ನು ನೀಡಿಲ್ಲ. ಬಜೆಟ್ ಹೆಚ್ಚು ಇದ್ದರೆ, ಯುವಕರು ಉನ್ನತ ವಿಶ್ವವಿದ್ಯಾಲಯಗಳು, ಇಂಟರ್ ನೆಟ್, ವಿದ್ಯಾರ್ಥಿ ವೇತನಗಳು, ಗ್ರಂಥಾಲಯಗಳು ಮತ್ತು ಹಾಸ್ಟೆಲ್ಗಳನ್ನು ಬಳಸಿಕೊಳ್ಳಬಹುದಾಗಿತ್ತು. ಈ ರೀತಿ ವಂಚನೆ ಮಾಡಿದ ಸರ್ಕಾರಕ್ಕೆ ನಿಮ್ಮ ಮತದ ಮೂಲಕ ಉತ್ತರ ಕೊಡಬಹುದು ಎಂದು ಯುವಕರಲ್ಲಿ ಮನವಿ ಮಾಡಿಕೊಂಡರು.