ಕ್ರಿಕೆಟ್ ಬೆಟ್ಟಿಂಗ್ ನಲ್ಲಿ 4 ಲಕ್ಷ ಹಣ ಕಳೆದುಕೊಂಡ ಯುವಕ ಕೊನೆಗೆ ಮಾಡಿದ್ದೇನು?

ಭಾನುವಾರ, 13 ಸೆಪ್ಟಂಬರ್ 2020 (13:41 IST)
ಹೈದರಾಬಾದ್: ಕ್ರಿಕೆಟ್ ಬೆಟ್ಟಿಂಗ್ ನಲ್ಲಿ 4 ಲಕ್ಷ ರೂ. ಕಳೆದುಕೊಂಡ ಯುವಕ ಕೊನೆಗೆ ಹಣ ತೀರಿಸಲಾಗದೇ ಜೀವಕೊನೆಗಾಣಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.


ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ನಿತೀಶ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿದ್ದ. ಇದರಿಂದಾಗಿ 4 ಲಕ್ಷ ರೂ. ಕಳೆದುಕೊಂಡಿದ್ದ. ಆದರೆ ಹಣ ಭರಿಸಲಾಗದೇ ಸಮೀಪದ ಕಾಲುವೆಗೆ ಹಾರಿ ಸ್ವಯಂ ಹತ್ಯೆ ಮಾಡಿಕೊಂಡಿದ್ದಾನೆ. ಈತನ ಮೋಟಾರ್ ಬೈಕ್ ಪಕ್ಕದಲ್ಲಿಯೇ ಬಿದ್ದಿದ್ದರಿಂದ ಅನುಮಾನಗೊಂಡ ಪೊಲೀಸರು ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ