ಡೇಟಿಂಗ್ ಆಪ್ ನಲ್ಲಿ ಮಹಿಳೆಯ ಫೋನ್ ನಂಬರ್ ಪ್ರಕಟಿಸಿದ ಭೂಪ

ಗುರುವಾರ, 17 ಸೆಪ್ಟಂಬರ್ 2020 (12:27 IST)
ನವದೆಹಲಿ: ಡೇಟಿಂಗ್ ಆಪ್ ಒಂದರಲ್ಲಿ ಯುವಕನೊಬ್ಬ ಮಹಿಳೆಯೊಬ್ಬರ ಫೋನ್ ನಂಬರ್ ಪ್ರಕಟಿಸಿದ ಪರಿಣಾಮ ಆಕೆಗೆ ನಿರಂತರ ಅಶ್ಲೀಲ ಸಂದೇಶಗಳು, ಕರೆಗಳು ಬರುತ್ತಿದ್ದ ಘಟನೆ ಚೆನ್ನೈನಲ್ಲಿ ನಡೆದಿದೆ.


ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ತನ್ನ ಬೇಕರಿಗೆ ಕೇಕ್ ಆರ್ಡರ್ ಮಾಡಲು ಬಂದ ಮಹಿಳೆಯ ಫೋನ್ ನಂಬರ್ ಕೊಟ್ಟು ಡೇಟಿಂಗ್ ಆಪ್ ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಇದರಿಂದಾಗಿ ಆಕೆಗೆ ನಿರಂತರವಾಗಿ ಕರೆ, ಸಂದೇಶಗಳು ಬರುತ್ತಿದ್ದವು. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ