‘ನನ್ನ ಮಕ್ಕಳು ಬಡತನದಿಂದ ಸಾಯುವುದನ್ನು ನೋಡಲಾರೆ’

ಸೋಮವಾರ, 10 ಏಪ್ರಿಲ್ 2017 (08:13 IST)
ಪಾಟ್ನಾ: ನನ್ನ ಮಕ್ಕಳು ಬಡತನದಿಂದ ಸಾಯುವುದನ್ನು ನೋಡಲಾರೆ. ಹೀಗಾಗಿ ಅವರಿಗೆ ಬೇಕಾದ ವ್ಯವಹಾರ ಮಾಡಿಕೊಂಡಿರಲಿ. ನನ್ನ ಅಭ್ಯಂತರವೇನೂ ಇಲ್ಲ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿಕೊಂಡಿದ್ದಾರೆ.

 

ಬಿಹಾರ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಲಾಲೂ ಪುತ್ರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪಾಲ್ ಯಾದವ್ 60 ಕೋಟಿ ಮೌಲ್ಯದ ಎರಡು ಎಕರೆ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆಂದು ವಿಪಕ್ಷ ಬಿಜೆಪಿ ಆರೋಪಿಸಿತ್ತು. ಈ ಭೂಮಿಯನ್ನು ಲಾಲೂ ಪುತ್ರರು, ಬೃಹತ್ ಮಾಲ್ ನಿರ್ಮಾಣಕ್ಕೆ ಸಂಸ್ಥೆಯೊಂದಿಗೆ ಒಪ್ಪಂದ ನಡೆಸಿದ್ದಾರೆ ಎಂಬುದು ಅವರ ಆರೋಪ.

 
ಈ ಬಗ್ಗೆ ಪ್ರತಿಕ್ರಿಯಿಸಿರುವ ಲಾಲೂ, ಇದು 500 ಕೋಟಿ ರೂ.ಗಳ ಪ್ರಾಜೆಕ್ಟ್ ಆಗಿದ್ದು, ಸಂಸ್ಥೆ ಮತ್ತು ತನ್ನ ಪುತ್ರರು ಲಾಭದ ಪಾಲು ಪಡೆಯಲಿದ್ದಾರೆ ಎಂದಿದ್ದಾರೆ. ಏನೋ ಪಾಪ, ಮಕ್ಕಳು ಏನೋ ವ್ಯವಹಾರ ಮಾಡಲು ಹೊರಟಿದ್ದಾರೆ. ಅವರ ಜೀವನ ಅವರು ನೋಡಿಕೊಳ್ಳಲಿ ಅಂತಿದ್ದಾರೆ ಪಾಪ ಲಾಲೂ!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ