ವಿಕಾಸ್ ಶಿರ್ಪುರ್ಕಾರ್ ನಮ್ಮ ಈ ವಾರದ ಧಾರ್ಮಿಕ ಯಾತ್ರೆ ಮಹಾರಾಷ್ಟ್ರದ ಧುಲಿಯಾದಲ್ಲಿ ಹರಿಯುವ ಪಂಜಾರ್ ನದಿ ದಂಡೆಯಲ್ಲಿರುವ ಆದಿಮಾಯೆ ಏಕವೀರ ದೇವಿ ಮಂದಿರಕ್ಕೆ. ತಾಯಿ ಏಕವೀರ ದೇವಿಗೆ ಭಕ್ತರಿರುವುದು ಮಾಹಾರಾಷ್ಟ್ರದಲ್ಲಿ ಮಾತ್ರವಲ್ಲ. ಮಧ್ಯಪ್ರದೇಶ, ರಾಜಸ್ಥಾನ್, ಕರ್ನಾಟಕ ಮತ್ತು ಗುಜರಾತ್‌ಗಳಿಂದಲೂ ಭಕ್ತರು ಇಲ್ಲಿಗೆ ಹರಿದು ಬರುತ್ತಾರೆ.
ಆದಿಶಕ್ತಿ ಏಕವೀರ ದೇವಿ, ಭಗವಾನ್ ಪರಶುರಾಮನ ತಾಯಿ ಎಂದು ಪ್ರತೀತಿ. ಏಕವೀರ ಮತ್ತು ರೇಣುಕಾ ದೇವಿಯು ಆದಿಮಾಯೆ ಪಾರ್ವತಿಯ ಅವತಾರಗಳು. ದುಷ್ಟಸಂಹಾರಕ್ಕಾಗಿ ಆದಿಮಾಯೆ ಹಲವು ರೂಪಗಳ ಅವತಾರ ತಾಳಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಪುರಾಣಗಳ ಪ್ರಕಾರ ವೀರಪತ್ರ ಪರಶುರಾಮನಿಂದಾಗಿ ಋಷಿಮುನಿ ಜಮದಗ್ನಿಯ ಪತ್ನಿ ರೇಣುಕಾ ದೇವಿ ಏಕವೀರ ಎಂಬ ಹೆಸರು ಪಡೆದಿರುವುದಾಗಿ ಹೇಳಲಾಗಿದೆ.
WD
ಮುಂಜಾನೆಯಲ್ಲಿ ಈ ದೇವಿಯ ದರ್ಶನ ಮಾಡುವುದೇ ಕಣ್ಣಿಗೆ ಹಬ್ಬ. ಸೂರ್ಯ ಕಿರಣಗಳು ಪಂಜಾರ್ ನದಿಯ ಪ್ರತಿಫಲನದೊಂದಿಗೆ ದೇವಿಯ ಪಾದಗಳಿಗೆ ಬೀಳುವ ಆ ರಮಣೀಯ ದೃಶ್ಯ ಅತ್ಯುದ್ಭುತ ಸುಂದರ.
ಈ ಮಂದಿರಲ್ಲಿ ತಾಯಿ ಏಕವೀರ ದೇವಿಯ ವಿಗ್ರಹವಲ್ಲದೆ, ಆದಿಪೂಜಿತ ಗಣೇಶ ಮತ್ತು ತುಕಾಯ್‌ಮಾತ ವಿಗ್ರಹಗಳಿವೆ. ಮಂದಿರದ ಪ್ರವೇಶ ದ್ವಾರದಲ್ಲಿ ಭವ್ಯ ಆನೆಗಳ ರೂಪವನ್ನು ಕೆತ್ತಲಾಗಿದೆ.
ರಾಷ್ಟ್ರದ ಏಕೈಕ ಶಮೀ ದೇವಾಲಯ ದೇವಾಲಯದ ಆವರಣದಲ್ಲಿ ಪ್ರಾಚೀನವಾದ ಶಮೀ ವೃಕ್ಷವಿದೆ. ಅಲ್ಲದೆ ಶಮೀದೇವ ಗುಡಿಯೂ ಇದ್ದು, ಇದು ಭಾರತದಲ್ಲಿರುವ ಏಕೈಕ ಶಮೀ ಮಂದಿರವಾಗಿದೆ. ದೇವಾಲಯದ ಆವರಣದಲ್ಲಿ ಮಹಾಲಕ್ಷ್ಮಿ, ವಿಠಲ ರುಕ್ಮಿಣಿ, ಸೀತಾಮಾತಾ, ಹನುಮಾನ್, ಭೈರವ ಮತ್ತು ಪರಶುರಾಮ ಮಂದಿರಗಳೂ ಇವೆ.
WD
ಇಲ್ಲಿ ನವರಾತ್ರಿಯ ವೇಳೆ ಉತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಭಕ್ತರ ಜನಜಾತ್ರೆಯೂ ಇಲ್ಲಿ ಜಮಾಯಿಸುತ್ತದೆ. ದೂರದೂರುಗಳಿಂದ ಜಾತ್ರಾ ವೇಳೆ ಭಕ್ತರು ಹರಿದು ಬರುತ್ತಾರೆ. ದೇವತೆ ಏಕವೀರ ದೇವಿ ತಮ್ಮ ಹರಕೆಗಳು, ಆಶೋತ್ತರಗಳನ್ನು ಈಡೇರಿಸುವುದರೊಂದಿಗೆ ಸಮಸ್ಯೆಯನ್ನು ನೀಗಿಸುತ್ತಾಳೆ ಎಂಬುದು ಭಕ್ತರ ನಂಬುಗೆ.
ಇಲ್ಲಿಗೆ ತಲುಪುವುದು ಹೇಗೆ? ರಸ್ತೆ ಮುಖಾಂತರ: ಧುಲಿಯಾ ಮುಂಬೈ-ಆಗ್ರಾ ಮತ್ತು ನಾಗ್ಪುರ-ಸೂರತ್ ರಾಷ್ಟ್ರೀಯ ಹೆದ್ದಾರಿಯ ನಡುವಿದೆ. ಇದು ಮುಂಬೈಯಿಂದ 425 ಕಿ.ಮೀ ದೂರದಲ್ಲಿದೆ.
ರೈಲು ಮೂಲಕ: ಮುಂಬೈಯಿಂದ ಚಾಲಿಸ್‌ಗಾಂವ್‌ಗೆ ತಲುಪಿದಲ್ಲಿ, ಚಾಲಿಸ್‌ಗಾಂವ್‌ನಿಂದ ಧುಲಿಯಾಗೆ ರೈಲು ಸೌಲಭ್ಯವಿದೆ.
ವಿಮಾನ ಮೂಲಕ: ಇಲ್ಲಿಗೆ ತಲುಪಲು ಸಮೀಪದ ವಿಮಾನ ನಿಲ್ದಾಣಗಳು ನಾಸಿಕ್(187ಕಿ.ಮೀ) ಮತ್ತು ಔರಂಗಾಬಾದ್(225 ಕಿ.ಮೀ)