ಮಧ್ಯಪ್ರದೇಶದ ಉಜ್ಜಯಿನಿಯ ಕಾಳಿಘಾಟ್ ಎಂಬಲ್ಲಿ ನೆಲಸಿದ್ದಾಳೆ ಮಹಾ ಕಾಳಿ. ಭಕ್ತ ಕಾಳಿದಾಸನಿಗೊಲಿದ ಗಢ ಕಾಳಿಕಾ ಮಾತೆ ಇಲ್ಲಿನ ಅಧಿದೇವತೆ ಎಂಬ ಅಂಶ ಈ ಕ್ಷೇತ್ರಕ್ಕೆ ಮತ್ತಷ್ಟು ಭಕ್ತಿ ಭಾವ ತುಂಬಿದೆ.
ಕವಿರತ್ನ ಕಾಳಿದಾಸನು ಕಾಳಿಕಾ ದೇವಿಯನ್ನು ಇಲ್ಲಿಯೇ ಒಲಿಸಿಕೊಂಡಿದ್ದ. ಈ ಕಾಳಿಯ ಆಶೀರ್ವಾದದ ಫಲದಿಂದಾಗಿಯೇ ಕಾಳಿದಾಸನು ಪರಮ ಪಂಡಿತನಾಗಿ ರೂಪುಗೊಂಡದ್ದು ಎಲ್ಲರಿಗೂ ತಿಳಿದಿರುವ ವಿಷಯ. ತನ್ನ ಆರಾಧ್ಯ ದೈವ ಕಾಳಿಯ ಮೇಲೆ ಕಾಳಿದಾಸ ರಚಿಸಿದ ‘ಶ್ಯಾಮಲಾ ದಂಡಕ’ ಎಂಬ ಸ್ತೋತ್ರ ರತ್ನವು ಇಂದಿಗೂ ವಿಶಿಷ್ಟ. ಇದನ್ನು ಪ್ರತಿವರ್ಷ ಉಜ್ಜಯಿನಿಯಲ್ಲಿ ಆಯೋಜಿಸಲಾಗುವ ‘ಕಾಳಿದಾಸ ಸಮಾರೋಹ’ ಎಂಬ ಕಾರ್ಯಕ್ರಮದಲ್ಲಿ ಪಠಿಸಲಾಗುತ್ತದೆ.
WD
WD
ಪ್ರತಿದಿನ ಭಾರೀ ಸಂಖ್ಯೆಯಲ್ಲಿ ಭಕ್ತರು ಈ ಮಾತೆಯ ಸಂದರ್ಶನ ಮಾಡುತ್ತಾರೆ. ಈ ಮಂದಿರ ಯಾವಾಗ ನಿರ್ಮಾಣವಾಯಿತು ಎಂಬ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಇಲ್ಲಿನ ಜನರ ನಂಬಿಕೆಯಂತೆ ಈ ಮಂದಿರವು ಮಹಾಭಾರತ ಕಾಲದಲ್ಲಿಯೇ ನಿರ್ಮಾಣಗೊಂಡಿತ್ತು. ಆದರೆ ಕಾಳಿಕಾ ದೇವಿಯ ವಿಗ್ರಹವು ಸತ್ಯಯುಗಕ್ಕೆ ಸೇರಿದ್ದೆಂಬ ನಂಬಿಕೆ ಇದೆ. ದೊರೆ ಹರ್ಷವರ್ಧನದಿಂದ ಈ ಮಂದಿರದ ಪುನರುತ್ಥಾನವಾಯಿತು, ಆ ಬಳಿಕ ದೀರ್ಘಾವಧಿಯ ಬಳಿಕ ಗ್ವಾಲಿಯರ್ ರಾಜಮನೆತನದಿಂದ ಈ ಮಂದಿರದ ಪುನರುಜ್ಜೀವನವಾಯಿತು ಎಂಬುದಕ್ಕೆ ಪುರಾವೆಗಳು ಲಭ್ಯ.
WD
ವರ್ಷಾದ್ಯಂತ ಇಲ್ಲಿ ಹಲವಾರು ಉತ್ಸವಗಳು ನಡೆಯುತ್ತಿದ್ದರೂ, ಅತಿದೊಡ್ಡದೆಂದರೆ ನವರಾತ್ರಿ. ಯಜ್ಞ, ವಿಶೇಷ ಪೂಜೆ ಪುನಸ್ಕಾರಗಳು ಇಲ್ಲಿ ನಡೆಯುತ್ತಿರುತ್ತವೆ.
ಇಲ್ಲಿಗೆ ಹೋಗುವುದು ಹೇಗೆ?
ವಾಯುಮಾರ್ಗ: ಉಜ್ಜಯಿನಿಯು ಮಧ್ಯಪ್ರದೇಶದ ಇಂದೋರ್ ವಿಮಾನ ನಿಲ್ದಾಣದಿಂದ 65 ಕಿ.ಮೀ. ದೂರದಲ್ಲಿದೆ.
ರೈಲು ಮಾರ್ಗ: ಉಜ್ಜಯಿನಿಗೆ ಸಾಕಷ್ಟು ರೈಲು ಸಂಪರ್ಕಗಳಿವೆ. ಪಶ್ಚಿಮ ರೈಲ್ವೇ ವಿಭಾಗದ ಪ್ರಮುಖ ಕೇಂದ್ರವೂ ಹೌದು.
ರಸ್ತೆ ಮಾರ್ಗ: ಇದು ಇಂದೋರಿನಿಂದ ಸುಮಾರು 60 ಕಿ.ಮೀ. ಹಾಗೂ ಭೋಪಾಲದಿಂದ 180 ಕಿ.ಮೀ. ದೂರದಲ್ಲಿದೆ.