ಮನದಲ್ಲಿ ನೆನೆದು ನೋಡಿ ಅರುಣಾಚಲೇಶ್ವರನನ್ನ

WD
ಪ್ರತಿ ಪೂರ್ಣಿಮೆಯ ದಿನ ಇಲ್ಲಿ ಲಕ್ಷದ ಲೆಕ್ಕದಲ್ಲಿ, ಅದೂ ಬರಿಗಾಲಿನಲ್ಲಿ 14 ಕಿ ಮಿ ದೂರದಲ್ಲಿರುವ ಬೆಟ್ಟಕ್ಕೆ ತೆರಳುತ್ತಾರೆ. ಪ್ರತಿವರ್ಷ ಕಾರ್ತಿಕ ಮಾಸದ ಕೃತಿಕಾ ನಕ್ಷತ್ರದಂದು ಸುಮಾರು 15 ಲಕ್ಷದವರೆಗೆ ಭಕ್ತರ ಸಂಖ್ಯೆ ಇರುತ್ತದೆ ಅಂದರೆ ಇದೆ ಎಂದರೆ ಈ ಕ್ಷೇತ್ರದ ಮಹಿಮೆ ಎನು ಎನ್ನುವುದು ಅರಿವಾಗದೇ ಇರದು.

ಅರುಣಾಚಲೇಶ್ವರನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಚೆನ್ನೈನಿಂದ 180 ಕಿ ಮಿ ದೂರದಲ್ಲಿರುವ ತಿರುವನ್ನಾ ಮಲೈ ಎಂದು ಕರೆಯಲ್ಪಡುವ ಪಟ್ಟಣದ ಹತ್ತಿರ ಅರುಣಾಚಲೇಶ್ವರ ಎಂಬ ಶಿವಾಲಯ ಇದೆ. ಅಲ್ಲಿಯೇ ವರ್ಷದ ಎಲ್ಲ ದಿನದಂದು ಭಕ್ತರ ಆಗಮನ ಇದ್ದೇ ಇರುತ್ತದೆ.

WD
ಅರುಣಾಚಲೇಶ್ವರ ಅಥವಾ ತಮಿಳರ ಪಾಲಿಗೆ ತೀರು ಅನ್ನಾಮಲೈಯಳ ಎಂದು ಪ್ರಚಲಿತವಾಗಿರುವ ಸುಮಾರು 2665 ಅಡಿ ಎತ್ತರದ ಬೆಟ್ಟ ಇದೆ. ಅದನ್ನೇ ಇಲ್ಲಿನವರು ಶಿವನು ಅಪರಾವತಾರ ಎಂದು ನಂಬಿದ್ದಾರೆ.

ಶಿವನ ಪಂಚಭೂತ ಶಕ್ತಿಗಳಲ್ಲಿ ಒಂದಾಗಿರು ಅಗ್ನಿ ಕ್ಷೇತ್ರ ಎಂದು ಅರುಣಾಚಲೇಶ್ವರ ಪ್ರತೀತಿ ಪಡೆದಿದೆ. ( ಕಾಂಚಿ ಮತ್ತು ತಿರುವರುರ್ ಪೃಥ್ವಿ) ಚಿದಂಬರಮ್ ( ಆಕಾಶ), ಕಾಳಹಸ್ತಿ ( ವಾಯು), ತಿರುವನೈಕಾ (ಜಲ) ಎಂದು ಪ್ರಸಿದ್ಧಿ ಪಡೆದಿವೆ.

ಅರುಣಾಚಲೇಶ್ವರನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಪೌರಾಣಿಕ ಹಿನ್ನಲೆ
WD
ಶಿವ ಪುರಾಣದಲ್ಲಿ ಅರುಣಾಚಲೇಶ್ವರನ ಉದ್ಭವದ ಕುರಿತು ಉಲ್ಲೇಖವಿದೆ. ಒಂದು ದಿನ ಬ್ರಹ್ಮ ಮತ್ತು ವಿಷ್ಣು ತಾನು ಶ್ರೇಷ್ಟ ಎಂದು ಪರಸ್ಪರ ವಾದ ಮಾಡುತ್ತಿದ್ದರು ಎಂದೂ, ವಾದ ಪರಿಹಾರವಾಗದೇ ಇಬ್ಬರೂ ಶಿವನ ಬಳಿ ಬಂದು ನಮ್ಮೀರ್ವರಲ್ಲಿ ಯಾರು ಉತ್ತಮರು ಎಂದು ಕೇಳಿದರಂತೆ.

ಅವರಿಬ್ಬರ ಪ್ರಶ್ನೆಗೆ ಶಿವನು ನೀವಿಬ್ಬರಲ್ಲಿ ಯಾರಾದರೂ ಒಬ್ಬರು ನನ್ನ ತಲೆಯನ್ನು ಇಲ್ಲವೇ ಪಾದವನ್ನು ನೋಡಿದಲ್ಲಿ ಅವರೇ ಶ್ರೇಷ್ಟರು ಎಂದು ಹೇಳಿ ಭೂಮ್ಯಾಕಾಶದ ಎತ್ತರದಲ್ಲಿ ಬೆಳೆದು ನಿಂತನು. ಬ್ರಹ್ಮ ಹಂಸರೂಪ ಧರಿಸಿ ತಲೆ ನೋಡಲು ಹಾರಿದನು. ವಿಷ್ಣು, ವರಾಹ ರೂಪ ಧರಿಸಿ ಭೂಮಿಯಲ್ಲಿ ಅಡಗಿರುವ ಶಿವನ ಪಾದ ನೋಡುವುದಕ್ಕೆ ಎಂದು ಭೂಮಿಯನ್ನು ತನ್ನ ಹಲ್ಲುಗಳಿಂದ ಅಗೆಯಲು ಪ್ರಾರಂಭಿಸಿದನು ಎಂದು ಹೇಳಲಾಗಿದೆ.

ಅರುಣಾಚಲೇಶ್ವರನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ವಿಷ್ಣು ಶಿವನ ಪಾದ ಕಾಣದೇ ಸೋತು ಮರಳಿದನು. ಬ್ರಹ್ಮನು ಕೂಡ ದಣಿದು ಮರಳುತ್ತಿರುವಾಗ ಶಿವನ ಜಡೆಯಿಂದ ಬಿಳುತ್ತಿದ್ದ ತಳಂಬು ಹೂವನ್ನು ನಾನು ಶಿವನ ತಲೆ ನೋಡಿದೆ ಎಂದು ಹೇಳು ಎಂದು ಕೇಳಿಕೊಂಡನಂತೆ, ಬ್ರಹ್ಮನ ಸುಳ್ಳಿನಿಂದ ಕುಪಿತಗೊಂಡ ಶಿವ ಅಗ್ನಿಯ ರೂಪ ಧರಿಸಿದನು. ಶಿವನ ಮೈಯಿಂದ ಹೊರ ಬರುತ್ತಿದ್ದ ಶಾಖ ಭೂಮಿ ಮತ್ತು ಸ್ವರ್ಗದಲ್ಲಿ ಸಹಿಸಲು ಆಸಾಧ್ಯವಾಯಿತು. ಶಿವನ ರೌದ್ರಾವತಾರ ತಾಳದ ಅಷ್ಟದಿಕ್ಪಾಲಕರು ನಿನ್ನ ಕ್ರೋಧವನ್ನು ಕಡಿಮೆ ಮಾಡು ಎಂದು ಪ್ರಾರ್ಥಿಸಿದರು. ಇದರಿಂದ ಶಿವನು ತೃಪ್ತನಾದನು. ಈ ಘಟನೆ ಮಹಾಶಿವರಾತ್ರಿ ಕಾರಣ ಎಂದು ಹೇಳಲಾಗಿದೆ.

WD

ತಲುಪುವುದು ಹೇಗೆ
ರಸ್ತೆ: ತಿರುವನ್ನಾಮಲೈಗೆ ಚೆನ್ನೈನಿಂದ ಸುಮಾರು 187 ಕಮಿ ದೂರದಲ್ಲಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ಸೌಕರ್ಯ ಇದೆ.
ರೈಲು ಸಂಪರ್ಕ: ಸುತ್ತು ಬಳಸಿದ ಪ್ರಯಾಣ ಚೆನ್ನೈ ಎಗ್ಮೋರ್‌ನಿಂದ ತಿಂಡಿವನಂ ಇಲ್ಲವೇ ವಿಲ್ಲುಪುರಂವರೆಗೆ ಹೋಗಿ ನಂತರ ತಿರುವನ್ನಾಮಲೈಗೆ ಬೇರೆ ರೈಲಿನಲ್ಲಿ ಪ್ರಯಾಣ ಮುಂದುವರಿಸಬಹುದು.
ವಿಮಾನ ಸಂಪರ್ಕ ಚೆನ್ನೈ ವಿಮಾನ ನಿಲ್ದಾಣ ನಂತರ ಬಸ್ ಇಲ್ಲವೆ ರೈಲು ಮೂಲಕ ಪ್ರಯಾಣ ಮುಂದುವರಿಸಬಹುದು.

ಅರುಣಾಚಲೇಶ್ವರನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.