ಮಧ್ಯಪ್ರದೇಶದ ದೇವಸ್ ನಗರ ಮಾತೆ ತುಳಜಾಭವಾನಿ ಹಾಗೂ ಚಮುಂಡಾ ಮಾತೆ ಮಂದಿರಗಳಿಗೆ ಪ್ರಸಿದ್ದವಾದ ಪಟ್ಟಣ .ಎರಡು ಮಂದಿರಗಳು ನಗರದಲ್ಲಿರುವ ಬೆಟ್ಟದ ಮೇಲೆ ನಿರ್ಮಾಣವಾಗಿವೆ.ಮಂದಿರದಲ್ಲಿರುವ ತುಳಜಾಭವಾನಿ ಹಾಗೂ ಚಮುಂಡಾ ಮಾತೆಯರನ್ನು ಹಿರಿಯ ಮಾತೆ ಹಾಗೂ ಕಿರಿಯ ಮಾತೆ ಎಂದು ಕರೆಯುತ್ತಾರೆ
ಮಂದಿರದ ಬಗ್ಗೆ ಕುತೂಹಲಭರಿತರಾಗಿ ಅರ್ಚಕರಿಗೆ ಮಂದಿರದ ಇತಿಹಾಸ ತಿಳಿಸಿ ಎಂದು ಕೋರಿದಾಗ ಅರ್ಚಕರು ಮಾತೆ ತುಳಜಾಭವಾನಿ ಹಾಗೂ ಚಮುಂಡಾ ಮಾತೆ ಸಹೋದರಿಯರಾಗಿದ್ದಾರೆ. ಒಂದು ಬಾರಿ ಇಬ್ಬರ ನಡುವೆ ಉಂಟಾದ ವೈಮನಸ್ಸಿನಿಂದಾಗಿ ಹಿರಿಯ ಮಾತೆ ಮಂದಿರವನ್ನು ತ್ಯಜಿಸಿ ಬೆಟ್ಟದ ಇನ್ನೊಂದು ಭಾಗದಲ್ಲಿ ನೆಲೆಸಿದ್ದಾಳೆ ಎಂದು ವಿವರಣೆ ನೀಡಿದರು.
WD
ಇಬ್ಬರ ನಡುವಣವಿರುವ ಭಿನ್ನಮತದ ಪರಿಸ್ಥಿತಿಯನ್ನು ಅರಿತ ಹನುಮಾನ್ ದೇವರು ಹಾಗೂ ಭೈರವರು ಮಾತೆ ತುಳಜಾಭವಾನಿ ಹಾಗೂ ಚಮುಂಡಾ ಮಾತೆಯರನ್ನು ಶಾಂತವಾಗಿರುವಂತೆ ಪ್ರಾರ್ಥಿಸಿದರು. ಇದನ್ನು ಒಪ್ಪಿಕೊಂಡ ಉಭಯ ದೇವತೆಯರು ಸ್ಥಳವನ್ನು ತ್ಯಜಿಸುವ ನಿರ್ಧಾರವನ್ನು ಕೈಬಿಟ್ಟರು. ಈ ಸಂದರ್ಭದಲ್ಲಿ ವಿಚಿತ್ರ ಘಟನೆ ನಡೆದು ಹಿರಿಯ ಮಾತೆಯ ದೇಹದ ಅರ್ಧಭಾಗ ಭೂಮಿಯಲ್ಲಿ ಹುದುಗಿ ಹೋಯಿತು. ಪ್ರಸ್ತುತವು ಹಿರಿಯ ಮಾತೆಯ ಮೂರ್ತಿಯ ಅರ್ಧ ಭಾಗ ಭೂಮಿಯಲ್ಲಿರುವುದನ್ನು ಕಾಣಬಹುದಾಗಿದೆ.
WD
ಮಾತೆ ತುಳಜಾಭವಾನಿ ಹಾಗೂ ಚಮುಂಡಾ ಮಾತೆಯರ ಮೂರ್ತಿಗಳು ಸ್ವಯಂ ಉದ್ಭವವಾಗಿವೆ ಎಂದು ಭಕ್ತರ ನಂಬುತ್ತಾರೆ. ಮನಸ್ಸಿನಿಂದ ಮಾತೆಯನ್ನು ಪ್ರಾರ್ಥಿಸಿದಲ್ಲಿ ಅವರ ಬೇಡಿಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿ ಮನೆಮಾಡಿದೆ. ಇತಿಹಾಸದ ಪ್ರಕಾರ ಹೋಳ್ಕರ್ ಹಾಗೂ ಪನ್ವರ್ ರಾಜರು ಏಕಕಾಲಕ್ಕೆ ಆಳಿದ ಪ್ರಥಮ ಸಾಮ್ರಾಜ್ಯವಾಗಿದೆ. ತುಳಜಾಭವಾನಿ ಹೋಳ್ಕರ್ ರಾಜರ ದೇವತೆಯಾದರೇ, ಚಮುಂಡಾದೇವಿ ಪನ್ವರ್ ರಾಜರ ದೇವತೆಯಾಗಿದ್ದಳು ಎಂದು ಪುರಾಣಗಳಲ್ಲಿ ಉಲ್ಲೇಖಿತವಾಗಿದೆ ಎಂದು ಹೇಳುತ್ತಾರೆ.
ಮಾತೆಯ ಮಂದಿರಕ್ಕೆ ಆಗಮಿಸುವ ಭಕ್ತರು ಭೈರವ ದೇವರನ್ನೂ ಪೂಜಿಸುತ್ತಾರೆ.ನವರಾತ್ರಿಯಲ್ಲಿ ವಿಶೇಷ ಪೂಜೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಂದಿರಕ್ಕೆ ಭೇಟಿ ನೀಡುತ್ತಾರೆ.
ತಲುಪುವುದು ಹೇಗೆ:
ಹತ್ತಿರದ ವಿಮಾನ ನಿಲ್ದಾಣ -ಇಂದೋರ್
ರಸ್ತೆ ಸಂಪರ್ಕ: ಆಗ್ರಾ-ಮುಂಬೈ(ಎನ್‌ಎಚ್ 3) ಇಂದೋರಿನಿಂದ 35 ಕಿ.ಮಿ.ಉಜ್ಜೈನಿಯಿಂದ 35 ಕಿ.ಮಿ.