ಸಂತ ಸಿಂಗಾಜಿಯ ಸಮಾಧಿ ಸ್ಥಳ

ಭಾನುವಾರ, 18 ಮೇ 2008 (13:37 IST)
WD
ಈ ಬಾರಿಯ ನಮ್ಮ ಧಾರ್ಮಿಕ ಪಯಣದಲ್ಲಿ ಪರಿಚಯಿಸುತ್ತಿರುವುದು ಸಂತ ಸಿಂಗಾಜಿಯ ಪುಣ್ಯ ಕ್ಷೇತ್ರವನ್ನು. ಸಂತ ಕಬೀರ್ ಅವರ ಸಮಕಾಲೀನನಾಗಿದ್ದರು ಎಂದು ಹೇಳಲಾಗುವ ಸಂತ ಸಿಂಗಾಜಿಯ ಕ್ಷೇತ್ರವು ಮಧ್ಯ ಪ್ರದೇಶದ ಖಾಂಡ್ವಾದಿಂದ 35 ಕಿ.ಮೀ ಅಂತರದಲ್ಲಿ ಇರುವ ಪಿಪ್ಲಿಯಾ ಎಂಬ ಕುಗ್ರಾಮದಲ್ಲಿ.

ಗೌಳಿಗಳ ಜಾತಿಯಲ್ಲಿ ಜನ್ಮ ತಳೆದ ಸಿಂಗಾಜಿ ಮೊದಲಿನಿಂದಲೂ ಸರಳ ವ್ಯಕ್ತಿತ್ವದವ. ಮನರಂಗ್ ಸ್ವಾಮಿಯ ಉಪದೇಶಗಳನ್ನು ಕೇಳಿದ ನಂತರ ಆದ್ಯಾತ್ಮೀಕ ಜೀವನದತ್ತ ಸಿಂಗಾಜಿ ತಿರುಗುತ್ತಾನೆ.
WD

ಮಾಳ್ವಾ ಮತ್ತು ನಿಮದ್ ಪ್ರಾಂತ್ಯದಲ್ಲಿ ಅತ್ಯಂತ ಪ್ರಚಲಿತದಲ್ಲಿರುವ ಸಾಧು ಸಂತರ ಹೆಸರುಗಳಲ್ಲಿ ಸಿಂಗಾಜಿ ಮಹಾರಾಜ್ ಅವರ ಹೆಸರು ಒಂದು. ಭಗವಂತನನ್ನು ನಿರ್ಗುಣ ರೂಪದಲ್ಲಿ ಆರಾಧಿಸಿದ ಸಂತ ಮಹಾರಾಜರು. ಉಪವಾಸ, ತೀರ್ಥ ಕ್ಷೇತ್ರಗಳಲ್ಲಿ ನಂಬಿಕೆ ಇಡದೇ ಭಗವಂತ ಹೃದಯದಲ್ಲಿ ನೆಲೆಸಿದ್ದಾನೆ ವಿನಃ ಎಲ್ಲಿಯೂ ಅಲ್ಲ ಎಂದು ಬೋಧಿಸಿದರು ಮತ್ತು ಅದರಂತೆ ನಡೆದರು.

ಯಾವ ವ್ಯಕ್ತಿಗೆ ತನ್ನ ಆತ್ಮ ದರ್ಶನವಾಗಿದೆಯೋ ಆ ವ್ಯಕ್ತಿ ದೈವಿ ಕೃಪೆಯನ್ನು ಪಡೆಯುವುದಕ್ಕೆ ಉಪವಾಸ, ವನವಾಸ ಮಾಡುವ ಅಗತ್ಯ ಇಲ್ಲ ಎಂದು ಹೇಳಿದರು.

WD
ಒಂದು ಬಾರಿ ಹೀಗಾಯಿತು. ಯಾರೋ ಒಬ್ಬರು ಓಂಕಾರೇಶ್ವರನ ದರ್ಶನ ಪಡೆಯಿರಿ ಎಂದು ಹೇಳಿದರಂತೆ, ಎಲ್ಲಿ ಕಲ್ಲು ಮತ್ತು ನೀರು ಇದೆಯೋ ಅದೇ ತೀರ್ಥ ಕ್ಷೇತ್ರ ಮತ್ತು ಪುಣ್ಯ ಕ್ಷೇತ್ರ ಎಂದು ಹೇಳಿದರಂತೆ. ಅವರ ಜೀವನದ ಉದ್ದಕ್ಕೂ ಎಲ್ಲಿಯೂ ಅವರು ಮಂದಿರ ನಿರ್ಮಿಸಲಿಲ್ಲ.

ಶ್ರಾವಣ ಮಾಸ ಶುಕ್ಲ ಪಕ್ಷದ ಒಂಭತ್ತನೇ ದಿನದಂದು ಸಿಂಗಾಜಿ ಮಹಾರಾಜ್ ಅವರು ತಮ್ಮ ದೇಹವನ್ನು ಗುರುವಿನ ಆದೇಶದಂತೆ ತ್ಯಜಿಸಿದರು. ಒಂದು ನಂಬಿಕೆಯ ಪ್ರಕಾರ ಅವರು ಧ್ಯಾನ ಮುದ್ರಾ ಸ್ಥಿತಿಯಲ್ಲಿ ಸಮಾದಿ ಸೇರಬೇಕು ಎಂದು ಬಯಸಿದ್ದರಂತೆ. ಅವರ ದೇಹ ಪರಿತ್ಯಾಗದ ಸಂದರ್ಭದಲ್ಲಿ ಹಿಂಬಾಲಕರು ಅವರೊಂದಿಗೆ ಇಲ್ಲದ್ದರಿಂದ ಸಾಧ್ಯವಾಗಲಿಲ್ಲವಂತೆ ಆರು ತಿಂಗಳ ನಂತರ ಹಿಂಬಾಲಕರ ಕನಸಿನಲ್ಲಿ ಬಂದು ನನ್ನನ್ನು ಧ್ಯಾನ ಮುದ್ರಾ ಸ್ಥಿತಿಯಲ್ಲಿ ಸಮಾಧಿ ಮಾಡಿ ಎಂದು ಹೇಳಿದರಂತೆ. ಅದೇ ಪ್ರಕಾರ ಹಿಂಬಾಲಕರು ನಂತರ ಸಿಂಗಾಜಿ ಮಹಾರಾಜ್‌ರನ್ನು ಧ್ಯಾನ ಮುದ್ರಾ ಸ್ಥಿತಿಯಲ್ಲಿ ಸಮಾಧಿ ಮಾಡಿದರು.

ನರ್ಮದಾ ಕೊಳ್ಳ ಯೋಜನೆಯ ಹಿನ್ನೀರಿನಲ್ಲಿ ಪಿಪ್ಲಿಯಾ ಗ್ರಾಮ ಸೇರಿದಂತೆ ಸಿಂಗಾಜಿ ಮಹಾರಾಜ್ ಅವರ ಸಮಾಧಿ ಸ್ಥಳವು ಮುಳುಗಡೆಯಾಗಿದೆ. ಐತಿಹಾಸಿಕ ಸಮಾಧಿಯನ್ನು ಸಂರಕ್ಷಿಸುವುದಕ್ಕೆ 60 ಅಡಿ ಎತ್ತರದ ಸಿಮೆಂಟ್‌ನಿಂದ ಗೋಡೆಯನ್ನು ನಿರ್ಮಿಸಲಾಗಿದ್ದು. ಅದರೊಂದಿಗೆ ಸಮಾಧಿಯನ್ನು ನವಿಕರಿಸಲಾಗಿದೆ. ಹೊಸ ದೇವಸ್ಥಾನದ ಒಳಗೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು ಆ ಮೆಟ್ಟಿಲುಗಳು ಪ್ರಾಚೀನ ಕಾಲದ ಸಂತ ಸಿಂಗಾಜಿ ಮಹಾರಾಜನ ಸಮಾಧಿಗೆ ಕರೆದೊಯ್ಯುತ್ತದೆ.
WD

ಕನ್ನಡಿಯ ಸ್ವಸ್ತಿಕ್ ಮಾಡಿ ಸಂತ ಸಿಂಗಾಜಿಗೆ ಒಪ್ಪಿಸುತ್ತೇನೆ ಎಂದು ಸಂತ ಸಿಂಗಾಜಿಯಲ್ಲಿ ಹರಕೆ ಹೊತ್ತುಕೊಂಡರೇ ಹರಕೆ ಈಡೇರಿದ ನಂತರ ಮಾಡಿಕೊಂಡ ಹರಕೆಯನ್ನು ಕಡ್ಡಾಯವಾಗಿ ಪೂರೈಸಲೇಬೇಕು. ಪ್ರತಿವರ್ಷ ಶರದ್ ಪೂರ್ಣಿಮೆಯ ದಿನದಂದು ಸಂತ ಸಿಂಗಾಜಿಯ ಜಾತ್ರೆ ನೇರೆವೇರುತ್ತದೆ.

ಸಾರಿಗೆ ಸೌಲಭ್ಯ- ಖಾಂಡ್ವಾದಿಂದ ಪ್ರತಿ ಅರ್ಧಗಂಟೆಗೆ ಬಸ್ ಇದೆ. ಖಾಂಡ್ವಾದಿಂದ ಬೀಡ್‌ವರೆಗೆ ರೈಲು ಸಾರಿಗೆ ಇದೆ.