ಪುರಂದರದಾಸರು ಆಡಿಸಿದಳೆಶೋಧೆ ಹಾಡು ಬರೆದ ದೇವಸ್ಥಾನವಿದು!

ಬುಧವಾರ, 22 ಫೆಬ್ರವರಿ 2017 (09:48 IST)
ಬೆಂಗಳೂರು: ಆಡಿಸಿದಳೆಶೋಧೆ ಜಗದೋದ್ದಾರನಾ… ಈ ಹಾಡನ್ನು ಯಾರು ಹಾಡಿದರೂ ಇಷ್ಟಪಟ್ಟು ಕೇಳುತ್ತೇವೆ. ಪುರಂದರ ದಾಸರು ಬರೆದ ಈ ಹಾಡು ಬರೆದ ದೇವಸ್ಥಾನ ನಮ್ಮ ಹತ್ತಿರದಲ್ಲೇ ಇದೆ.

 
ಗೊಂಬೆಗಳ ನಾಡು ಚನ್ನಪಟ್ಟಣದ ಬಳಿ ಅಂಬೆಗಾಲು ಕೃಷ್ಣ ದೇವಾಲಯವಿದೆ. ಇದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿದೆ. ಬೆಂಗಳೂರಿನಿಂದ ಹೊರಟರೆ ಅಂದಾಜು 98 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ.

ಇದು ಅಂಬೆಗಾಲು ಹಾಕಿರುವ ಕೃಷ್ಣನ ಮೂರ್ತಿ ಆರಾಧ್ಯ ದೈವ. ಇಲ್ಲೊಂದು ಕಡೆ ಆಡಿಸಿದಳೆಯಶೋಧೆ ಹಾಡಿನ ಸಾಲು ಕಾಣುತ್ತದೆ. ಅದೇ ಜಾಗದಲ್ಲಿ ಪುರಂದರ ದಾಸರು ಈ ಹಾಡನ್ನು ಬರೆದರಂತೆ.

ತುಂಬಾ ಪುರಾತನವಾದ ದೇವಾಲಯವಿದು. ಶಿಲೆಗಳಿಂದ ಮಾಡಿದ ಮಂಟಪ ನಮ್ಮೊಳಗೆ ಭಕ್ತಿ ಹುಟ್ಟಿಸುತ್ತದೆ. ಮಕ್ಕಳಾಗಬೇಕೆಂದು ಬಯಸುವ ದಂಪತಿ ಇಲ್ಲಿ ಬಂದು ಪೂಜೆ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಎನ್ನುವ ನಂಬಿಕೆಯಿದೆ.  ಈ ಹೆದ್ದಾರಿಯಲ್ಲಿ ಸಂಚರಿಸುವಾಗ ಒಮ್ಮೆ ಈ ದೇವಾಲಯಕ್ಕೆ ಹೊಕ್ಕು ಕೃಷ್ಣನ ದರ್ಶನ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ