ಕಟೀಲಿನ ದುರ್ಗಾಪರಮೇಶ್ವರಿ ದೇವಾಲಯ

ಗುರುವಾರ, 23 ಜೂನ್ 2016 (19:52 IST)
ಮಂಗಳೂರಿನಿಂದ 20 ಕಿಮೀ ದೂರವಿರುವ ಕಟೀಲಿನ ಜನಪ್ರಿಯ ದುರ್ಗಾಪರಮೇಶ್ವರಿ ದೇವಾಲಯವು ನಂದಿನಿ ನದಿಯ ಮಧ್ಯದಲ್ಲಿ ನೆಲೆಗೊಂಡಿದೆ.  ಕಟೀಲು ಹೆಸರು ಎರಡು ಪದಗಳಿಂದ ಜನ್ಯವಾಗಿದೆ. ಕಟಿ ಎಂದರೆ ನಡು(ಸೊಂಟ), ಇಳೆ ಎಂದರೆ ಭೂಮಿ. ಕಟೀಲ್ ಎಂದರೆ ಭೂಮಿಯ ನಡುವಿನ ಪ್ರದೇಶವೆಂದು ಅರ್ಥ.
 
ಪೌರಾಣಿಕ ಇತಿಹಾಸ: ಅರುಣಾಸುರ ರಾಕ್ಷಸನಾಗಿದ್ದು ಪ್ರಬಲನಾಗಿ ಬೆಳೆದು ಭೂಮಿಯ ಶಾಂತಿಯನ್ನು ಕದಡಿದ್ದ.  ದೇವರುಗಳು ಕೂಡ ಅಸಹಾಯಕರಾಗಿದ್ದರು. ಎರಡು ಅಥವಾ ನಾಲ್ಕು ಕಾಲುಗಳ ಜೀವಿಗಳಿಂದ ತಾನು ಸಾಯಬಾರದೆಂದು ಅರುಣಾಸುರ ಬ್ರಹ್ಮನಿಂದ ವರ ಪಡೆದುಕೊಂಡಿದ್ದ.  ಅರುಣಾಸುರ ದುಷ್ಕೃತ್ಯಗಳು ಹತೋಟಿ ಮೀರಿದಾಗ ಆದಿಶಕ್ತಿ ಸುಂದರ ಯುವತಿಯಾಗಿ ಭೂಮಿಗಿಳಿದು ಅರುಣಾಸುರನನ್ನು ಅಣಕಿಸಿದಳು.

ಅರುಣಸೂರ ಕೋಪದಿಂದ ಆದಿಶಕ್ತಿಯನ್ನು ಕೊಲ್ಲಲು ಯತ್ನಿಸಿದಾಗ ಅವಳು ಕಲ್ಲಾಗಿ ಪರಿವರ್ತನೆಯಾದಳು. ಕಲ್ಲನ್ನು ಒಡೆಯಲು ರಾಕ್ಷಸ ಯತ್ನಿಸಿದಾಗ ಬೃಹತ್ ಗಾತ್ರದ ಕೋಪೋದ್ರಿಕ್ತ ಜೇನುನೊಣಗಳು ಕಲ್ಲಿನಿಂದ ಹೊರಹೊಮ್ಮಿ ಅವನು ಸಾಯುವ ತನಕ ಕಚ್ಚುವ ಮೂಲಕ ಭೂಮಿಯ ಕೆಟ್ಟ ಪೀಡೆಯನ್ನು ನಿವಾರಿಸಿದವು.
 
 ಈ ಯಶಸ್ಸಿನಿಂದ ಸಂತರು ಮತ್ತು ಋಷಿಗಳು ಆದಿಶಕ್ತಿಗೆ ಅಭಿಷೇಕ ನೆರವೇರಿಸಿದ ಬಳಿಕ ನಂದಿನಿ ನದಿಯ ಮಧ್ಯೆ ಆದಿಶಕ್ತಿ ಲಿಂಗದ ರೂಪ  ತಳೆಯಿತು. ಅದರ ಸುತ್ತಲೂ ದುರ್ಗಾಪರಮೇಶ್ವರಿ ಮಂದಿರವನ್ನು ನಿರ್ಮಿಸಲಾಯಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ