ಶ್ರವಣಬೆಳಗೊಳ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಜೈನ ಯಾತ್ರಾಸ್ಥಳವಾಗಿದೆ. ಪಟ್ಟಣದ ಮಧ್ಯದಲ್ಲಿರುವ ಕೊಳದಿಂದ ಈ ಪ್ರದೇಶಕ್ಕೆ ಹೆಸರು ಬಂದಿದೆ.(ಬೆಳ-ಕೊಳ ಅಂದರೆ ಬಿಳಿಯ ಕೊಳ). ಶ್ರವಣಬೆಳಗೊಳ ಬಾಹುಬಲಿ ಪ್ರತಿಮೆಗೆ ಪ್ರಖ್ಯಾತವಾಗಿದ್ದು, ಜಗತ್ತಿನಲ್ಲಿ ಅತೀ ಎತ್ತರದ ಶಿಲೆಯ ಪ್ರತಿಮೆ ಎಂದು ಹೆಸರು ಪಡೆದಿದೆ. 58 ಅಡಿ ಎತ್ತರದ ಈ ಮೂರ್ತಿಯನ್ನು ಗ್ರಾನೈಟ್‌ನ ಏಕಶಿಲೆಯಿಂದ ಕೆತ್ತಲಾಗಿದೆ. 3347 ಅಡಿ ಎತ್ತರದ ಬೆಟ್ಟದ ಮೇಲೆ ಗೋಮಟೇಶ್ವರ ಮಂದಿರವನ್ನು ನಿರ್ಮಿಸಲಾಗಿದೆ.
ಬಾಹುಬಲಿ ಮೊದಲ ಜೈನ ತೀರ್ಥಂಕರ ಆದಿನಾಥನ ಪುತ್ರ.
ಆದಿನಾಥನಿಗೆ 99 ಮಂದಿ ಮಕ್ಕಳಿದ್ದು, ರಾಜ್ಯಭಾರವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದಾಗ ಇಬ್ಬರು ಸೋದರರಾದ ಬಾಹುಬಲಿ ಮತ್ತು ಭರತನ ನಡುವೆ ಸಾಮ್ರಾಜ್ಯಕ್ಕಾಗಿ ದೊಡ್ಡ ಯುದ್ಧ ನಡೆಯುತ್ತದೆ. ಭರತ ಯುದ್ಧದಲ್ಲಿ ಸೋತರೂ ಬಾಹುಬಲಿಗೆ ತಮ್ಮನ ಸೋಲಿನಿಂದ ಸಂತೋಷದ ಭಾವನೆಯೇನೂ ಉಂಟಾಗಲಿಲ್ಲ. ತನ್ನ ಸೋದರನಿಗೆ ರಾಜ್ಯವನ್ನು ಒಪ್ಪಿಸಿ, ಸಕಲ ಧನಕನಕಗಳನ್ನು ತ್ಯಜಿಸಿ ಕೇವಲಜ್ಞಾನವನ್ನು ಸಂಪಾದಿಸುತ್ತಾನೆ.