ಗವಿ ಗಂಗಾಧರೇಶ್ವರ ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು, ಬಹುಶಃ 9ನೇ ಶತಮಾನದಲ್ಲಿ ಬೃಹತ್ ಗಾತ್ರದ ಕಲ್ಲಿನಿಂದ ಕೆತ್ತಲಾಗಿದೆ. ಈ ದೇವಾಲಯವು ಭಗವಾನ್ ಶಿವನಿಗೆ ಅರ್ಪಿತವಾಗಿದ್ದು, ಶಿವಲಿಂಗ ಮುಖ್ಯ ಮೂರ್ತಿಯಾಗಿದೆ. ದೇವಾಲಯದ ಮುಂಭಾಗದಲ್ಲಿ ಭಗವಾನ್ ಶಿವನ ವಾಹನ ನಂದಿ ಕೆತ್ತನೆಯನ್ನು ಕಾಣಬಹುದು.
ಮುಖ್ಯ ದ್ವಾರಕ್ಕೆ ಎಡಭಾಗದಲ್ಲಿ ಶಕ್ತಿ ಗಣಪತಿಯ ಮೂರ್ತಿಯಿದ್ದು, 12 ಕೈಗಳಿಂದ ಕೂಡಿದೆ. ಆವರಣದಲ್ಲಿ ನಾಲ್ಕು ಸ್ತಂಭಗಳಿದ್ದು, ಡಮರು ಮತ್ತು ತ್ರಿಶೂಲ ಮತ್ತು ಎರಡು ಫ್ಯಾನ್‌ಗಳಿವೆ.
ಅಗ್ನಿ ದೇವರ ಅಪರೂಪದ ಮೂರ್ತಿ ಇಡೀ ದಕ್ಷಿಣ ಭಾರತದಲ್ಲೇ ವಿಶಿಷ್ಟವಾಗಿದೆ. ಅಗ್ನಿ ದ್ವಿಶಿರಗಳಿಂದ ಕೂಡಿದ್ದು, ಏಳು ಕೈಗಳು ಮತ್ತು ಮೂರು ಕಾಲುಗಳಿವೆ. ಈ ದೇವರನ್ನು ಪೂಜಿಸುವುದರಿಂದ ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುತ್ತದೆಂದು ನಂಬಲಾಗಿದೆ. ಮಕರ ಸಂಕ್ರಾಂತಿಯ ಜನವರಿ 14 ಅಥವಾ 15ರಂದು ಪ್ರತಿವರ್ಷ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದೊಂದು ವಿಶೇಷ ಸಂದರ್ಭವಾಗಿದ್ದು, ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ನೇರವಾಗಿ ಒಂದು ಗಂಟೆಯ ಕಾಲ ಬೀಳುತ್ತದೆ.