ಗುಜರಾತಿನ ಸ್ತಂಭೇಶ್ವರ ಮಹಾದೇವ

WD
ಪ್ರಕೃತಿ ಭಗವಂತ ಶಿವನನ್ನು ಪೂಜಿಸುವ ಅಪೂರ್ವ ದೇವಾಲಯಕ್ಕೆ ಈ ಭಾರಿಯ ಧಾರ್ಮಿಕ ಯಾತ್ರೆಯಲ್ಲಿ ನಾವು ನಿಮ್ಮನ್ನು ಕರೆದೊಯ್ಯುತ್ತಿದ್ದೇವೆ.

ಹೌದು. ಇದು ನಿಜ. ಗುಜರಾತಿನ ಸ್ತಂಭೇಶ್ವರ ದೇವಾಲಯದಲ್ಲಿ ನೀವು ಈ ವೈಶಿಷ್ಠ್ಯವನ್ನು ಕಾಣಲು ಸಾಧ್ಯ. ಇಲ್ಲಿ ಸಮುದ್ರದ ದೊಡ್ಡ ಅಲೆ ಉಕ್ಕಿ ಹರಿದಾಗ ದೇವಾಲಯದೊಳಗೆ
WD
ನುಸುಳುವ ನೀರು ಶಿವಲಿಂಗವನ್ನು ಸಂಪೂರ್ಣ ಮುಳುಗಿಸುತ್ತದೆ. ಇದು ಸಮುದ್ರದಿಂದ ಶಿವನಿಗೆ ಜಲಾಭಿಷೇಕ ಎಂಬುದಾಗಿಯೇ ನಂಬಲಾಗುತ್ತಿದೆ. ದೇವಾಲಯದಲ್ಲಿ ಪ್ರತಿದಿನ ಎರಡು ಭಾರಿ ಇದು ಘಟಿಸುತ್ತದೆ.

ಗುಜರಾತಿನ ಭರೂಚ್ ಜಿಲ್ಲೆಯ ಕಾವಿ ಜಿಲ್ಲೆಯಲ್ಲಿ ಸ್ತಂಭೇಶ್ವರ ದೇವಾಲಯ ನೆಲೆಗೊಂಡಿದೆ. ಸಮುದ್ರವು ಶಿವನಿಗೆ ಅಭಿಷೇಕ ಮಾಡುವ ಈ ದೃಶ್ಯವನ್ನು ಕಂಡಾಗ ಭಕ್ತರು
WD
ಭಾವಪರವಶರಾಗುತ್ತಾರೆ. ಈ ದೇವಾಲಯದಲ್ಲಿ ಸಾಕ್ಷಾತ್ ಶಿವ ನೆಲೆಸಿದ್ದಾನೆ ಎಂಬುದು ಜನರ ಪ್ರತೀತಿ.

ದೇವಾಲಯದೊಳಕ್ಕೆ ನೀರು ನುಗ್ಗುವ ಖಚಿತ ಸಮಯದ ಕುರಿತು ಭಕ್ತರಿಗೆ ಕಾಲಕಾಲಕ್ಕೆ ಮಾಹಿತಿ ನೀಡುವುದಾಗಿ ಇಲ್ಲಿನ ಪೂಜಾರಿ ವಿದ್ಯಾನಂದ ಹೇಳುತ್ತಾರೆ. ಹೀಗಾಗಿ ಭಕ್ತರು ಈ ಅಪೂರ್ವ ಕ್ಷಣವನ್ನು ಕಣ್ಣಲ್ಲಿ ತುಂಬಿಕೊಳ್ಳಬಹುದಾಗಿದೆ ಎಂದು ಅವರು ಹೇಳಿತ್ತಾರೆ.

WD
ಪುರಾಣಗಳ ಪ್ರಕಾರ
ಶಿವನ ಪುತ್ರ ಕಾರ್ತಿಕೇಯನನ್ನು ಆರರ ಹರೆಯದಲ್ಲಿ ದೇವತೆಗಳ ಸೇನೆಯ ಅಧಿಪತಿಯಾಗಿ ನೇಮಿಸಲಾಗಿತ್ತು. ದೇವಾನುದೇವತೆಗಳು ಮತ್ತು ಋಷಿಮುನಿಗಳು ತಾರಕಾಸುರನ ಭೀತಿಯನ್ನು ಎದುರಿಸುತ್ತಿದ್ದ ವೇಳೆ ಕಾರ್ತಿಕೇಯನಿಗೆ ಈ ಜವಾಬ್ದಾರಿ ಒಪ್ಪಿಸಲಾಗಿತ್ತು. ತಾರಕಾಸುರನನ್ನು ಕೊಂದ ಕಾರ್ತಿಕೇಯ ಈ ಮೂಲಕ ಎಲ್ಲರಿಗೂ ನಿರಾಳತೆ ಉಂಟುಮಾಡಿದ.

ಆದರೆ ತಾರಕಾಸುರ ಅತಿದೊಡ್ಡ ಶಿವಭಕ್ತ. ಈ ಸತ್ಯವು ಗೊತ್ತಾದ ಬಳಿಕ ಕಾರ್ತಿಕೇಯನಿಗೆ ತನ್ನ ಕೃತ್ಯದ ಕುರಿತು ಪಶ್ಚಾತಾಪ ಉಂಟಾಗುತ್ತದೆ. ಈ ವೇಳೆಯಲ್ಲಿ ಕಾರ್ತಿಕೇಯನನ್ನು ಕೊಂದ ಜಾಗದಲ್ಲೇ ಶಿವ ದೇವಾಲಯವನ್ನು ಸ್ಥಾಪಿಸಲು ಭಗವಾನ್ ವಿಷ್ಣು ಕಾರ್ತಿಕೇಯನಿಗೆ ಸಲಹೆ ನೀಡುತ್ತಾನೆ.
WD
ಅಂತೆಯೇ ಕಾರ್ತಿಕೇಯ ದೇವಾಲಯ ನಿರ್ಮಿಸುತ್ತಾನೆ. ಇಲ್ಲಿ ಎಲ್ಲಾ ದೇವತೆಗಳು ಸೇರಿ 'ವಿಶ್ವನಂದಕ' ಎಂಬ ಸ್ತಂಭವೊಂದನ್ನು ಸ್ಥಾಪಿಸುತ್ತಾರೆ. ಈ ಸ್ತಂಭದಲ್ಲಿ ಶಿವನ ಆವಾಹನೆಯಾಗುತ್ತದೆ. ಆ ಬಳಿಕ ಈ ದೇವಾಲಯವು ಸ್ತಂಭೇಶ್ವರ ದೇವಾಲಯವೆಂಬ ಪ್ರಸಿದ್ಧಿ ಪಡಕೊಂಡಿತು ಎಂಬುದಾಗಿ ಸ್ಕಂದ ಪುರಾಣ ಹೇಳುತ್ತದೆ.

ಉತ್ಸವ
WD
ಮಹಾಶಿವರಾತ್ರಿಯ ವೇಳೆ ಈ ಸ್ತಂಭೇಶ್ವರ ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ. ಅಂತೆಯೇ ಪ್ರತೀ ಅಮವಾಸ್ಯೆಯ ವೇಳೆಗೂ ಇಲ್ಲಿ ಹಬ್ಬನಡೆಸಲಾಗುತ್ತದೆ. ಹಿಂದೂ ಕ್ಯಾಲೆಂಡರಿನ ಮೊದಲ ಹಾಗೂ 11ದಿನ ಮತ್ತು ಹುಣ್ಣಿಮೆಯ ದಿನದಂದು ರಾತ್ರಿಯಿಡೀ ಇಲ್ಲಿ ಭಕ್ತರು ದೇವರನ್ನು ಪೂಜಿಸಿ ಆರಾಧಿಸುತ್ತಾರೆ.

ಅಲೆಗಳ ಅಬ್ಬರದ ವೇಳೆ ಶಿವಲಿಂಗವನ್ನು ಅಲೆಗಳು ಸುತ್ತುವರಿಯುವ ಇಲ್ಲಿನ ಈ ಮನಮೋಹಕ ದೃಶ್ಯವನ್ನು ಸವಿಯಲು ಭಕ್ತಾದಿಗಳು ದೂರದೂರದೂರುಗಳಿಂದ ಆಗಮಿಸುತ್ತಾರೆ.