ಗುಜರಾತ್‌ನ ಖೇಡಾ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಡಾಕೋರ್ ಗ್ರಾಮ, ಡಂಕಾನಾಥನ ದೇವಸ್ಥಾನದ ಕಾರಣ ಡಂಕಾಪುರ ಎಂದು ಹೆಸರು ಪಡೆದಿತ್ತು. ಕ್ರಿ.ಶ 1722ರ ಅವಧಿಯಲ್ಲಿ ಡಂಕಾನಾಥ್ ಮಂದಿರ ಪ್ರಸಿದ್ಧಿ ಪಡೆದಿತ್ತು ಎಂಬ ಉಲ್ಲೇಖವಿದೆ. ರಣಛೋಡ್‌ರಾಯಜಿ ಮಂದಿರವನ್ನು ಶ್ರೀಕೃಷ್ಣ ಕಟ್ಟಿಸಿದ್ದಾನೆ ಎಂಬ ನಂಬಿಕೆ ಇದ್ದು. ಡಾಕೋರ್ ದೇವಾಲಯ ಆ ಕಾಲದಲ್ಲಿ ಪ್ರಸಿದ್ದಿಯ ಉತ್ತುಂಗಕ್ಕೆ ಏರಿತ್ತು.
ಶ್ರೀಕೃಷ್ಣನಿಗೆ ರಣಛೋಡ್‌ರಾಯಜಿ ಎಂದು ಹೆಸರು ಬಂದಿದೆ. ಮಥುರಾದಲ್ಲಿ ಜರಾಸಂಧನ ವಿರುದ್ಧ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ ರಣರಂಗದಿಂದ ಪಲಾಯನ ಮಾಡಿದ್ದರಿಂದ ಈ ಹೆಸರು ಆತನಿಗೆ ಬಂತು ಎಂಬ ಪ್ರತೀತಿ ಇದೆ. ಇಲ್ಲಿನ ಮೂರ್ತಿ ಮತ್ತು ದ್ವಾರಕೆಯಲ್ಲಿನ ದ್ವಾರಕಾಧೀಶನನ್ನು ಹೋಲುತ್ತದೆ.
ಪ್ರತಿನಿತ್ಯ ಮೂರ್ತಿಗೆ ಅರ್ಚನೆ ಮಾಡಲಾಗುತ್ತಿದ್ದು, ವಿವಿದ ರೀತಿಯಲ್ಲಿ ಮುಂಜಾನೆಯಿಂದ ಸಾಯಂಕಾಲದವರೆಗೆ ಆರತಿ ಮತ್ತು ಮಹಾ ಮಂಗಳಾರತಿಗಳನ್ನು ನೆರವೇರಿಸಲಾಗುತ್ತದೆ. ಮಂಗಲಭೋಗ, ಬಾಲಭೋಗ, ಶೃಂಗಾರಭೋಗ, ಗ್ವಾಲಭೋಗ, ಸಖಿಭೋಗ ಎಂದು ಕರೆಯಲಾಗುವ ಶೃಂಗಾರಗಳನ್ನು ಮೂರ್ತಿಗೆ ಮಾಡಲಾಗುತ್ತದೆ.
WD
ಪ್ರತಿ ವರ್ಷ ಸರಾಸರಿ 35 ಹಬ್ಬಗಳನ್ನು ಆಚರಿಸಲಾಗುತ್ತದೆ. ಕಾರ್ತಿಕ, ಫಾಲ್ಗುಣ, ಚೈತ್ರ, ಮತ್ತು ಅಶ್ವಿನ ಮಾಸದ ಪೂರ್ಣಿಮೆಯ ದಿನಗಳಂದು ನಡೆಯುವ ಉತ್ಸವಗಳು ಪ್ರಖ್ಯಾತವಾಗಿವೆ.
ವೈಷ್ಣವರ ಹಬ್ಬಗಳಲ್ಲಿ ಹೋಳಿ, ಅಮಲಕಾ ಏಕಾದಶಿ, ಗೋಕುಲಾಷ್ಟಮಿ, ರಥಯಾತ್ರೆ. ದಸರಾ ಹಬ್ಬಗಳ ದಿನದಂದು, ಗೋಪಾಲನ ಮೂರ್ತಿಯ ಮೆರವಣಿಗೆ ಮಾಡಲಾಗುತ್ತದೆ.
WD
ರಣಛೋಡ್‌ರಾಯಜಿಯ ದರ್ಶನಮಾಡುವುದರಿಂದ ಅಪಾರವಾದ ಪುಣ್ಯ ಲಭಿಸುತ್ತದೆ. ಈ ಮಂದಿರಕ್ಕೆ ಭೇಟಿ ನೀಡುವುದು ಮತ್ತು ನಾಲ್ಕು ಧಾಮಗಳ ಕ್ಷೇತ್ರದರ್ಶನಕ್ಕೆ ಸಮ ಎಂದು ಹೇಳಲಾಗುತ್ತದೆ.
ಸಂಪರ್ಕ
ವಿಮಾನ: ಅಹ್ಮದಾಬಾದ್ ಬಂದು ನಂತರ 95 ಕಿಮಿ ರಸ್ತೆ ಪ್ರಯಾಣ
ರೈಲು: ಆನಂದ್-ಗೋಧ್ರಾ ರೈಲು ಮಾರ್ಗದ ನಡುವೆ ಡಾಕೋರ್ ಬರುತ್ತದೆ.
ರಸ್ತೆ: ಅಹ್ಮದಾಬಾದ್ ಮತ್ತು ವಡೋದರಾದಿಂದ ರಾಜ್ಯ ರಸ್ತೆ ಸಾರಿಗೆ ಬಸ್ ಸೌಕರ್ಯವಿದೆ.