ಪರಶುರಾಮನ ಜನ್ಮಸ್ಥಳ ಈ ಪರಶುರಾಮ್ ಪುರಿ

WD
ಉತ್ತರ ಪ್ರದೇಶದ ಶಹಾಜಹಾನ್ ಪುರ್ ಆಸುಪಾಸಿನಲ್ಲಿ ಬರುವ ಈ ಖೇಡಾ ಪರಶುರಾಮ್ ಪುರಿ, ವಿಷ್ಣುವಿನ ಅವತಾರ ಎಂದು ಹೇಳಲಾಗುವ ಪರಶುರಾಮನ ಜನ್ಮ ಸ್ಥಳ ಎಂಬ ನಂಬಿಕೆ ಇದ್ದು, ಬ್ರಾಹ್ಮಣರ ಪಾಲಿಗೆ ಇದು ಹೆಮ್ಮೆಯ ಸ್ಥಳ ಎಂದು ಸಾವಿರಾರು ವರ್ಷಗಳಿಂದ ಖ್ಯಾತಿ ಪಡೆದಿದೆ.

ಮೋಘಲರ ಆಡಳಿತಾವಧಿಯಲ್ಲಿ ಇಲ್ಲಿದ್ದ ನಜೀಬ್ ಖಾನ್ ಎಂಬ ಪಾಳೆಗಾರನ ಮಗ ರಹ್ಮತ್ ಖಾನ್ ಎಂಬುವನು ತನ್ನ ಮಗನಾದ ಜಲಾಲುದ್ದಿನ್ ನೆನಪಿನಲ್ಲಿ ಪರಶುರಾಮಪುರಿಗೆ ಜಲಾಲ್‌ಬಾದ್ ಎಂದು ಪುನರ್ ನಾಮಕರಣ ಮಾಡಿದನು ಎಂಬ ಐತಿಹ್ಯವಿದೆ ಆದರೆ ಇಂದಿಗೂ ಜನರು ಈ ಗ್ರಾಮವನ್ನು ಜಲಾಲ್ ಬಾದ್ ಎಂದು ಕರೆಯುತ್ತಾರೆ.
WD

ವಿಚಿತ್ರ ಎಂದರೆ ಉತ್ತರ ಪ್ರದೇಶದ ರಾಜಕೀಯದಲ್ಲಿ ಕೂಡ ಪರಶುರಾಮನು ಬಹುಮುಖ್ಯ ಪಾತ್ರವಹಿಸಿದ್ದಾನೆ. ಪರಶುರಾಮನು ಇಲ್ಲಿನ ಬ್ರಾಹ್ಮಣರ ಪಾಲಿಗೆ ಹೆಮ್ಮೆಯ ಮತ್ತು ಗೌರವದ ಸಂಗತಿ. ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಸಂಖ್ಯೆ ಗಮನಾರ್ಹವಾಗಿರುವ ಕಾರಣ ಬ್ರಾಹ್ಮಣರನ್ನು ಒಲೈಸಲು ಎಲ್ಲ ಪಕ್ಷಗಳು ರಾಜಕೀಯ ಕಸರತ್ತು ನಡೆಸುತ್ತವೆ. ಇದೇ ನೆಪವನ್ನು ಬಂಡವಾಳವಾಗಿಸಿಕೊಂಡ ಬ್ರಾಹ್ಮಣರು ಪರಶುರಾಮನಿಗೆ ದೈವದ ಸ್ವರೂಪ ನೀಡಿ ಇಲ್ಲಿನ ಪರಶುರಾಮನ ದೇವಸ್ಥಾನವನ್ನು ಬೃಹತ್ತಾಗಿ ನಿರ್ಮಿಸಿದರು.

ಐತಿಹಾಸಿಕ ಹಿನ್ನಲೆ:
3ನೇ ಶತಮಾನದಲ್ಲಿ ಗಣಗಳು ಎಂದು ಪ್ರಸಿದ್ಧವಾಗಿದ್ದ ಕಣ್ಯಾಕುಂಜ ಎಂಬ ಗಣದ ಆಧೀನದಲ್ಲಿ ಇತ್ತು. ಮೋಘಲರ ಆಡಳಿತದಲ್ಲಿ ರುಹೇಲಾ ಸರದಾರ ನಜೀಬ್ ಖಾನ್ ಮತ್ತು ಅವನ ಮಗ ಹಾಫೀಜ್ ಖಾನ್ ಇಲ್ಲಿ ಬಲವಾದ ಕೋಟೆಯನ್ನು ನಿರ್ಮಿಸಿದರು. ಅಳಿದುಳಿದ ಕೋಟೆಯ ಅವಶೇಷಗಳನ್ನು ಬಳಸಿಕೊಂಡು ತೆಹಶಿಲ್ ಕಟ್ಟಡವನ್ನು ನಿರ್ಮಿಸಲಾಗಿದೆ.
WD

ಪ್ರಾಚೀನ ಕಾಲದ ಪರಶುರಾಮ ಮಂದಿರದ ಮಧ್ಯ ಭಾಗದಲ್ಲಿ ಶಿವಲಿಂಗ ಇದೆ. ಶಿವಲಿಂಗ ಎದುರಿಗೆ ಪ್ರಾಚೀನ ಕಾಲದ ಪರಶುರಾಮನ ಮೂರ್ತಿ ಇದೆ. ನಂಬಿಕೆಯ ಪ್ರಕಾರ ಪರಶುರಾಮನೇ ಸ್ವತಃ ಈ ಶಿವಲಿಂಗವನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ. ಕಾಲಾನಂತರದಲ್ಲಿ ಮುಸ್ಲಿಮರ ದಾಳಿಗೆ ಸಿಲುಕಿ ದೇವಸ್ಥಾನ ದ್ವಂಸಗೊಂಡಿತು. ಆದರೂ ಕೂಡ ಪ್ರತಿ ಬಾರಿ ಮಂದಿರವನ್ನು ನಿರ್ಮಿಸಲಾಯಿತು. ಮಂದಿರ ನಿರ್ಮಿಸುವ ಸಂದರ್ಭದಲ್ಲಿ ಪರಶುರಾಮನಿಗೆ ಸೇರಿದವು ಎನ್ನಲಾದ ಹಲವಾರು ವಸ್ತುಗಳು ಇಲ್ಲಿ ಜನರಿಗೆ ದೊರಕಿವೆ.ಸತ್ಯಯುಗ ಅಂತ್ಯದಲ್ಲಿ ವಿಷ್ಣು, ವೈಶಾಖ ಶುಕ್ಲ ಅಕ್ಷಯ ತೃತೀಯ ದಿನದಂದು ಇಲ್ಲಿ ಪರಶುರಾಮನ ಅವತಾರ ತಾಳಿದನು.
WD

ಇದೇ ಸ್ಥಳದಲ್ಲಿ ಪರಶುರಾಮನ ಪಿತೃಗಳಾದ ಜಮದಗ್ನಿ ಋಷಿಯೂ ಕೂಡ ಜನ್ಮ ತಾಳಿದ್ದನು ಮತ್ತು ಇಲ್ಲಿಯೇ ತಪಸ್ಸು ಕೈಗೊಂಡಿದ್ದನು. ಮತ್ತು ಪರಶುರಾಮನ ತಾಯಿಯಾದ ರೇಣುಕಾದೇವಿ ಕೂಡ ಇಲ್ಲಿ ವಾಸವಾಗಿದ್ದಳು. ಇಂದಿಗೂ ಕೂಡ ದೇವಸ್ಥಾನದ ಪಶ್ಚಿಮ ಭಾಗದಲ್ಲಿ ದಾಕ್ಷಾಯಿಣಿ ದೇವಸ್ಥಾನ ಇದ್ದು ಆ ದೇವಸ್ಥಾನದಲ್ಲಿ ರೇಣುಕಾ ದೇವಿ ವಾಸಿಸುತ್ತಿದ್ದಳು ಎನ್ನುವ ನಂಬಿಕೆ ಇದೆ.