ಏಷ್ಯಾದ ಅತಿ ದೊಡ್ಡ ಮಸೀದಿ ಎಂಬ ಒಂದೇ ಕಾರಣಕ್ಕೆ ಇದು ಮಸೀದಿಗಳ ಕಳಶ ಎಂದು ಹೆಸರು ಪಡೆದಿಲ್ಲ. ಇನ್ನೂ ಹತ್ತು ಹಲವು ವಿಶೇಷತೆಗಳು ಈ ಮಸೀದಿಯಲ್ಲಿ ಉಂಟು. ಭೋಪಾಲ್‌ನಲ್ಲಿ ಇರುವ ತಾಜ್ ಉಲ್ ಮಸೀದಿಗೆ ಜಾಮಾ ಮಸೀದಿ ಎಂದು ಕರೆಯುತ್ತಾರೆ. ಜಾಮಾ ಇಲ್ಲವೇ ತಾಜ್ ಉಲ್ ಎಂದು ಕರೆಯುವ ಮಸೀದಿಯಲ್ಲಿ ಭಕ್ತಿಯ ಪರವಶತೆ ತಂತಾನೆ ಮೈಗೂಡುತ್ತದೆ. ಅಷ್ಟೊಂದು ಪ್ರಶಾಂತತೆ ಇಲ್ಲಿ ನೆಲೆಸಿದೆ.
ಸುಂದರವಾದ ನೀರಿನ ಕೊಳ, ಪ್ರಾರ್ಥನೆಗೆ ಎಂದು ಮೀಸಲು ಇರುವ ದೊಡ್ಡದಾದ ಪ್ರಾಂಗಣ ಇದೆಲ್ಲಕ್ಕೂ ಕಳಶವಿಟ್ಟಂತೆ ಇರುವ ಮಸೀದಿಯ ಎರಡು ಗುಂಬಜ್‌ಗಳು ಕಲಾತ್ಮಕತೆಯ ದೃಷ್ಟಿಯಿಂದ ಕಣ್ಮನ ಸೆಳೆಯುತ್ತವೆ.
WD
ಗುಲಾಬಿ ಬಣ್ಣದಲ್ಲಿ ಅರಳಿದ ಹೂವಿನಂತೆ ಕಾಣುವ ಮಸೀದಿಗೆ ಎರಡು ಬೃಹತ್ ಗಾತ್ರದ ಗುಂಬಜ್‌ಗಳು ಆಕರ್ಷಕವಾಗಿ ಕಾಣುತ್ತವೆ. ವಿಶಿಷ್ಟವಾಗಿ ಇರುವ ಗುಂಬಜ್‌ಗಳು ಸತ್ಯ ಮಾರ್ಗದಲ್ಲಿ ನಡೆಯುವುದಕ್ಕೆ ಪ್ರೇರಣೆ ನೀಡುತ್ತವೆ ಎನ್ನುವುದು ಭಕ್ತರ ಅಚಲ ನಂಬಿಕೆ.
ಭೋಪಾಲ್‌ನ ಈ ಮಸೀದಿ ಸ್ಥಳೀಯ ಕಲಾವಿದನ ಕಲಾನೈಪುಣ್ಯತೆಗೆ ಸಾಕ್ಷಿಯಾಗಿ ನಿಂತಿದ್ದು, ಇಂಡೋ-ಸೆರಾಸೆನಿಕ್ ಶೈಲಿಯಲ್ಲಿ ಮಸೀದಿಗೆ ಮೂರ್ತರೂಪ ನೀಡಲಾಗಿದೆ. ಮೊಘಲ್ ಚಕ್ರವರ್ತಿ ಶಹಾಜಹಾನ್ ಪತ್ನಿ ಖುದಿಸಾ ಬೇಗಂ ಮಸೀದಿಯನ್ನು ನಿರ್ಮಿಸಿದಳು ಎಂಬ ನಂಬಿಕೆ ಇದೆ. ಈ ಮಸೀದಿಯ ಇನ್ನೊಂದು ವಿಶೇಷತೆ ಎಂದರೆ ಎಲ್ಲ ಧರ್ಮದವರು ಇಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ.
ಖುತುಬ್ ಖಾನಾ (ಗ್ರಂಥ ಸಂಗ್ರಹಾಲಯ) ಪ್ರಾಚೀನ ಮತ್ತು ವಿರಳವಾದ ಸಂಪದ್ಭರಿತ ಉರ್ದು ಸಾಹಿತ್ಯ ಭಂಡಾರ. ಅಲ್ಲದೇ ಮೊಘಲ್ ಚಕ್ರವರ್ತಿ ಅಲಂಗಿರ್ ಔರಂಗಜೇಬ್, ಸುವರ್ಣಾಕ್ಷರಗಳಲ್ಲಿ ಬರೆದಿದ್ದ ಎನ್ನಲಾಗುವ ಪವಿತ್ರ ಕುರಾನ್‌ನ ಒಂದು ಪ್ರತಿ ಈ ಮಸೀದಿಯಲ್ಲಿದೆ.
WD
ಅರುವತ್ತು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿರುವ ಇಜ್‌ತಿಮಾಗೆ ಪ್ರತಿವರ್ಷ ಜಗತ್ತಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಸಾರಿಗೆ ಸಂಪರ್ಕ
ವಿಮಾನ:
ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನಗರಕ್ಕೆ ದೇಶದ ಪ್ರಮುಖ ನಗರಗಳಿಂದ ನೇರ ವಿಮಾನ ಸೇವೆ ಇದೆ.
ರೈಲು:
ದೇಶದ ಮಧ್ಯ ಭಾಗದಲ್ಲಿ ಭೋಪಾಲ್ ಇರುವುದರಿಂದ ಯಾವುದೇ ಸ್ಥಳದಿಂದ ನೀವು ರೈಲು ಹತ್ತಬಹುದು.
ಬಸ್ ಸೌಕರ್ಯ:
ಇಂದೋರ್, ಮಾಂಡು, ಖುಜರಾಹೊ, ಪಂಚಮುಡಿ, ಗ್ವಾಲಿಯರ್, ಸಾಂಚಿ ನಗರಗಳಿಂದ ನೇರ ಬಸ್ ಸೌಕರ್ಯ ಇದೆ.