ಶಿವನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ಕುರಿತು ಈ ನಮ್ಮ ಧಾರ್ಮಿಕ ಕಥಾನಕದಲ್ಲಿ ಮೂಡಿ ಬರುತ್ತಿದೆ. ಪವಿತ್ರ ಭಾಗಿರಥಿ ನದಿಯ ಪಶ್ಚಿಮ ತಟದಲ್ಲಿ ಇರುವ ವಾರಣಾಸಿ ಇಲ್ಲವೆ ಕಾಶಿ ಜಗತ್ತಿನ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದು. ಮೇಲಾಗಿ ಭಾರತದ ಆದ್ಯಾತ್ಮಿಕ ಮತ್ತು ಸಾಂಸ್ಕೃತಿಕವನ್ನು ಪ್ರತಿಬಿಂಬಿಸುವ ಮಹಾನಗರ.
ಇದೇ ಮಹಾನಗರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ವಿಶ್ವನಾಥ ಲಿಂಗ ರೂಪದಲ್ಲಿ ನೆಲೆಸಿದ್ದಾನೆ. ಭಾರತದ ಆದ್ಯಾತ್ಮಿಕ ಇತಿಹಾಸದಲ್ಲಿ ವಿಶ್ವೇಶ್ವರನಿಗೆ ವಿಶಿಷ್ಟ ಸ್ಥಾನ ಇದೆ. ಅಬಾಲ ವೃದ್ದರಾದಿಯಾಗಿ ಕಾಶಿಗೆ ಬರಬೇಕು ವಿಶ್ವನಾಥನ ದರ್ಶನ ಪಡೆದು ಜೀವನ ಪಾವನವಾಗಬೇಕು ಎಂದು ಹಿಂದುಗಳು ಬೇಡಿಕೊಳ್ಳುತ್ತಾರೆ. ಅದೊಂದು ಹರಕೆಯ ಹಿಂದೆ ಜನನ ಮರಣಗಳಿಂದ ಮುಕ್ತಿ ನೀಡುವ ಮೋಕ್ಷದ ಬಯಕೆ ಇರುತ್ತದೆ.
ಗಂಗೆ ಅಥವಾ ಭಗಿರಥನಿಂದ ಧರೆಗೆ ಬಂದ ಭಾಗಿರಥಿಯಲ್ಲಿ ಮಿಂದು ಪಾವನರಾದರೆ ಸಾವು ನೋವುಗಳಿಂದ ಚಿರಕಾಲ ಮುಕ್ತಿ ಎನ್ನುವುದು ಹಿಂದುಗಳಲ್ಲಿ ನಂಬಿಕೆ ಇದೆ.
ಧಾರ್ಮಿಕ ನಂಬಿಕೆ
WD
ಈ ಭೂಮಿ ಹುಟ್ಟಿದ ನಂತರ ಸೂರ್ಯನ ಪ್ರಥಮ ಕಿರಣ ಬಿದ್ದಿದ್ದೆ ಕಾಶಿಯ ಮೇಲೆ ಎನ್ನುವುದು ನಂಬಿಕೆ. ಇದೇ ಕಾರಣದಿಂದ ಕಾಶಿ ಜ್ಞಾನದ, ಆದ್ಯಾತ್ಮದ ತವರೂರು ಆಯಿತು. ಕೈಲಾಸದಿಂದ ಹೊರಗೆ ಬಿದ್ದ ಶಿವ ಹಲವಾರು ವರ್ಷಗಳ ಅಲೆದಾಟದ ನಂತರ ಕಾಶಿಗೆ ಬಂದು ನೆಲೆಸಿದನೆಂದೂ. ಹಾಗೇ ಬಂದ ಪರಶಿವನನ್ನು ಬ್ರಹ್ಮನ ಹತ್ತು ಅಶ್ವಗಳಿರುವ ರಥವನ್ನು ದಶಾಶ್ವಮೇಧ ಘಾಟ್‌ಗೆ ಕಳುಹಿಸಿ ಕಾಶಿಗೆ ಬರಮಾಡಿಕೊಂಡನೆಂದು ಪ್ರತೀತಿ ಇದೆ.
ಕಾಶಿ ವಿಶ್ವನಾಥನ ದೇವಸ್ಥಾನ
WD
ವಿಶ್ವನಾಥನ ದೇವಸ್ಥಾನದ ಸಂಕೀರ್ಣದ ತುಂಬ ಚಿಕ್ಕ ಚಿಕ್ಕ ಮಂದಿರಗಳೇ ಇರುವುದು. ಮಧ್ಯದಲ್ಲಿ ಇರುವುದೇ ವಿಶ್ವನಾಥನ ಮಂದಿರ. ಮಂದಿರದ ಉತ್ತರ ದಿಕ್ಕಿನಲ್ಲಿ ಜ್ಞಾನ ವಾಪಿ ಅಥವಾ ಜ್ಞಾನ ಭಾವಿ ಎಂಬ ಬಾವಿ ಇದೆ. ವಿಶ್ವನಾಥನ ಮಂದಿರ ಗರ್ಭಗೃಹ ಮತ್ತು ಮಂಟಪವನ್ನು ಹೊಂದಿದ್ದು. ಗರ್ಭಗೃಹದಲ್ಲಿ ವಿಶ್ವನಾಥನು ಲಿಂಗರೂಪದಲ್ಲಿ ಇದ್ದು, ಶಿವನ ಲಿಂಗ 16 ಅಡಿ ಎತ್ತರ ಎತ್ತರ ಇದೆ. ಲಿಂಗಕ್ಕೆ ಬೆಳ್ಳಿಯ ಹೊದಿಕೆ ಹಾಕಲಾಗಿದೆ. ಮಂದಿರದ ಒಳಭಾಗ ವಿಶಾಲವಾಗಿ ಇರದಿದ್ದರೂ ಪ್ರಶಾಂತತೆ ಅನ್ನುವುದು ನೆಲೆಸಿದೆ.
ಇತಿಹಾಸ ದೇವಸ್ಥಾನ ಪೂರ್ವ ಇತಿಹಾಸ ಕಾಲದಿಂದಲೂ ಅಸ್ತಿತ್ವದಲ್ಲಿ ಇರಬಹುದು ಎಂಬ ನಂಬಿಕೆ ಇದೆ. ಇಂದೋರ್‌ನ ರಾಣಿ ಅಹಲ್ಯಾದೇವಿ 1776ರಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದಳು. ನಂತರ ಲಾಹೋರ್‌ನ ಮಹಾರಾಜಾ ರಣಜೀತ್ ಸಿಂಗ್ ಒಂದು ಸಾವಿರ ಕೆಜಿ ಚಿನ್ನವನ್ನು ಗೋಪುರ ನಿರ್ಮಾಣಕ್ಕೆ ನೀಡಿದನು. 1983ರಲ್ಲಿ ಉತ್ತರ ಪ್ರದೇಶ ಸರಕಾರವು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಬನಾರಸ್ ಪ್ರಾಂತ್ಯವನ್ನು ಆಳುತ್ತಿದ್ದ ಮಾಜಿ ದೊರೆ ವಿಭೂತಿ ಸಿಂಗ್ ಅವರನ್ನು ಟ್ರಸ್ಟಿಯಾಗಿ ನೇಮಿಸಿತು.
ಪೂಜಾ ವಿಧಾನ ಬ್ರಾಹ್ಮಿ ಮೂಹುರ್ತ ಎಂದು ಹೇಳುವ ಸಮಯದಲ್ಲಿ ಮಂದಿರವನ್ನು ತೆರೆಯಲಾಗುತ್ತದೆ. ಬೆಳಗಿನ ಮೂರರಿಂದ ನಾಲ್ಕು ಗಂಟೆಯವರೆಗೆ ಮಂಗಳಾರತಿ ಈ ಸಮಯದಲ್ಲಿ ಟಿಕೆಟ್ ಇರುವ ಭಕ್ತರು ವಿಶ್ವನಾಥನ ದರ್ಶನ ಪಡೆಯುತ್ತಾರೆ. ನಾಲ್ಕು ಗಂಟೆಯ ನಂತರ ಎಲ್ಲರಿಗೂ ವಿಶ್ವನಾಥನ ದರ್ಶನ ಪಡೆಯುವ ಅವಕಾಶ ಇರುತ್ತದೆ. 11-30 ಕ್ಕೆ ಭೋಗ ಆರತಿ ನಡೆಯುತ್ತದೆ. ಪುನಃ ಭಕ್ತರಿಗೆ ದರ್ಶನದ ಅವಕಾಶ ಇರುತ್ತದೆ. ರಾತ್ರಿ ಏಳರ ನಂತರ ಸಪ್ತರ್ಷಿ ಪೂಜೆ ನೆರವೆರಿಸಲಾಗುತ್ತದೆ. ರಾತ್ರಿ 9 ಗಂಟೆಗೆ ಶೃಂಗಾರ ಇಲ್ಲವೇ ಭೋಗ ಆರತಿ ಪ್ರಾರಂಭವಾಗುತ್ತದೆ. ರಾತ್ರಿಯ ಶಯನಾರತಿ ನಂತರ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ.
WD
ಉತ್ತರ ಭಾರತದ ಗಂಗಾ ನದಿ ತಟದಲ್ಲಿ ವಾರಣಾಸಿ ಇರುವುದರಿಂದ ಮತ್ತು ಪ್ರಮುಖ ಆದ್ಯಾತ್ಮಿಕ ಕೇಂದ್ರವಾಗಿರುವುದರಿಂದ ದೇಶದ ಯಾವುದೇ ಪ್ರಮುಖ ನಗರಗಳಿಂದ ನೇರವಾದ ವಿಮಾನ ಮತ್ತು ರೈಲು ಸೌಲಭ್ಯ ಇದೆ. ವಾರಣಾಸಿಯಲ್ಲಿ ಎರಡು ರೈಲು ನಿಲ್ದಾಣಗಳಿದ್ದು ಯಾವುದೇ ಒಂದು ನಿಲ್ದಾಣದಲ್ಲಿ ಇಳಿದರೂ ವಿಶ್ವನಾಥನನ್ನು ಸುಲಭವಾಗಿ ತಲುಪಬಹುದು.