ವಿಜಯವಾಡದ ತ್ರಿಶಕ್ತಿ ಪೀಠ

WD
ಸೃಷ್ಟಿ,ಸ್ಥಿತಿ ಮತ್ತು ಲಯ ಶಕ್ತಿಗಳು ಏಕರೂಪದ ಪ್ರತಿರೂಪ ದತ್ತಾತ್ರೇಯನಾದರೆ, ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿಗಳ ಸಂಗಮ ತ್ರಿಶಕ್ತಿಗಳಲ್ಲಿ ಆಗಿದೆ ಎನ್ನುವುದನ್ನು ಪುರಾಣಗಳಲ್ಲಿ ವೇದ್ಯವಾಗಿರುವ ಸಂಗತಿ. ವಿಜಯವಾಡದಲ್ಲಿ ಈ ಮೂರು ಕ್ರಿಯಾಶಕ್ತಿಗಳ ಸಂಗಮವಾದ ದೇವಸ್ಥಾನವಿದೆ. ಅದೇ ಈ ಬಾರಿ ನಮ್ಮ ಧಾರ್ಮಿಕ ಪಯಣದ ಗುರಿ.

ಕೃಷ್ಣೆಯ ತಟದಲ್ಲಿ ವಿಜಯವಾಡದಲ್ಲಿರುವ ತ್ರಿಶಕ್ತಿ ಪೀಠವೇ ಈ ಬಾರಿಯ ನಮ್ಮ ಧಾರ್ಮಿಕ ಕ್ಷೇತ್ರದ ಪಯಣ. ಆಂದ್ರ ಪ್ರದೇಶದ ವಿಜಯವಾಡ ಎಂಬ ನಗರದಲ್ಲಿ ಮಹಾಕಾಳಿಯ ದೇವಸ್ಥಾನವಿದ್ದು, ಇದನ್ನು ತ್ರಿಶಕ್ತಿ ಪೀಠ ಎಂದು ಕರೆಯಲಾಗುತ್ತದೆ.
WD

ಐತಿಹಾಸಿಕ ಹಿನ್ನಲೆ:
ಸಮಿಪದ ನೆಲ್ಲೊರ್ ಕಾಡಿನಲ್ಲಿ ಸಿಕ್ಕ ಸ್ವಯಂಭೂ ಮೂರ್ತಿಯನ್ನು ತಂದ ಮಿಲಿಟರಿ ಇಂಜಿನಿಯರ್ ಓರ್ವ ವಿಜಯವಾಡದಲ್ಲಿ ಸ್ಥಾಪಿಸಿದನು. ನಂತರ 14 ಅಗಸ್ಟ್ 1947ರಿಂದ ಸತತವಾಗಿ 11 ವರ್ಷಗಳ ಕಾಲ ಕಾಳಿದಾಸ ಎಂದು ಹೆಸರು ಪಡೆದ ಗುಂಜಾ ರಾಮಸ್ವಾಮಿಯನ್ನು ಕಾಳಿಯ ಅರ್ಚನೆ ಮಾಡಿದನು. ನಂತರ ಕೆಲ ವಿಚಿತ್ರ ಕಾರಣಗಳಿಂದ ಮಂದಿರದಲ್ಲಿ ದೇವತಾರಾಧನೆ ಸ್ಥುಗಿತಗೊಂಡಿತು. 1965ರ ನಂತರವೇ ಮಂದಿರದ ಪೂಜಾ ಕೈಂಕರ್ಯ ತುರುಗಾ ವೇಂಕಟೇಶ್ವರಲುರಿಂದ ಪ್ರಾರಂಭವಾಯಿತು. ಸತತ ಹದಿನೈದು ವರ್ಷಗಳ ಕಾಲ ಮುಚ್ಚಿದ ಬಾಗಿಲಲ್ಲಿ ಇದ್ದ ಕಾಳಿಕಾದೇವಿಯ ಮೂರ್ತಿಯ ಎದುರು ನಿತ್ಯ ನಂದಾ ದೀಪ ಇರುತ್ತಿತ್ತು ಎಂದು ನೋಡಿದವರು ಹೇಳುತ್ತಾರೆ. ಅಂದಿನಿಂದಲೇ ತ್ರಿಶಕ್ತಿಯ ಮಹಾತ್ಮೆ ಅರಿತು ನಿತ್ಯ ಪೂಜೆ ಪ್ರಾರಂಭವಾಯಿತು.

ದಶಮುಖ ಪ್ರಹಾರಿಣಿ ಮಹಾಕಾಳಿ
WD

ಈ ಶಕ್ತಿ ಮಾತೆಯ ರುದ್ರ ಸೌಂದರ್ಯ ಇಲ್ಲಿನ ಮೂರ್ತಿಯಲ್ಲಿ ಅನಾವರಣಗೊಂಡಿದೆ ಗಾಢ ನೀಲಿ ಬಣ್ಣದಲ್ಲಿ ಮುಳುಗಿ ಎದ್ದುಬಂದಂತೆ ಕಾಣುವ ರೌದ್ರರೂಪದ ಕಾಳಿ, ಭಕ್ತರ ಭಯ ಮತ್ತು ಭಕ್ತಿಯ ಭಾವನೆಯನ್ನು ಬಿತ್ತುತ್ತಾಳೆ. ದಶಮುಖ ಪ್ರಹಾರಿಣಿಯ ರೂಪದಲ್ಲಿ ಇರುವ ಇಲ್ಲಿನ ಮೂರ್ತಿಗೆ ಹತ್ತು ಕಾಲುಗಳು ಕಾಲುಗಳಡಿಯಲ್ಲಿ ದುಷ್ಟ ಮರ್ಧನ. ಎಂಟು ಕೈಯಗಳಲ್ಲಿ ಶಂಖ ಚಕ್ರ, ಬಿಲ್ಲು ಬಾಣಗಳು ಮತ್ತು ಮನುಷ್ಯನ ರುಂಡಗಳನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ.

ವಿಷ್ಣುವನ್ನು ಯೋಗ ನಿದ್ರೆಗೆ ತೆರಳುವಂತೆ ಮಾಡಿದ ಮಹಾಕಾಳಿಗೆ ಯೋಗ ನಿದ್ರಾ ಎಂಬ ಹೆಸರು ಉಂಟು. ಇಲ್ಲಿಯೇ ಸೃಷ್ಟಿ ಕರ್ತೃ ಬ್ರಹ್ಮನು ಮಹಾಕಾಳಿಯನ್ನು ಉದ್ದೇಶಿಸಿ ತಾಯಿ ವಿಷ್ಣುವನ್ನು ಯೋಗ ನಿದ್ರೆಯಿಂದ ಬಿಡುಗಡೆ ಮಾಡು. ಹಾಗೆ ಬಿಡುಗಡೆ ಮಾಡಿದ ನಂತರವೇ ಅವನಿಂದ ಮಧು ಕೈತಬ ರಾಕ್ಷಸರ ಸಂಹಾರ ಸಾಧ್ಯ ಎಂದು ಬೇಡಿಕೊಂಡನು ಎಂಬ ಪ್ರತೀತಿ ಇದೆ.

ಮಹಾಲಕ್ಷ್ಮೀ
ಹವಳ ಕೆಂಪಿನಲ್ಲಿ ಮಿನುಗುವ ಇಲ್ಲಿನ ಲಕ್ಷ್ಮೀಯ ಮೂರ್ತಿಗೆ 18 ಕೈಗಳಿಗೆ ಇದ್ದು, ಎಲ್ಲ ಕೈಗಳಲ್ಲಿ ಗಂಡುಗೊಡಲಿ, ಗದೆ. ಖಡ್ಗ, ತ್ರಿಶೂಲ ಮತ್ತು ಸುದರ್ಶನ ಚಕ್ರಧಾರಿಯಾಗಿ ನಿಂತಿದ್ದಾಳೆ. ಈ ಮೂರ್ತಿಯನ್ನು ನೋಡುತ್ತಿದ್ದಂತೆಯೇ ದುಷ್ಟ ಶಕ್ತಿ ವಿರುದ್ಧ ಹೋರಾಡುವುದಕ್ಕೆ ಧರೆಗಿಳಿದ ಲಕ್ಷ್ಮೀಯೇ ಮೂರ್ತ ಸ್ವರೂಪ ಪಡೆದಿದ್ದಾಳೆ ಏನೊ ಎಂಬ ಭಾವನೆ ಬರುತ್ತದೆ.

ಅಷ್ಟ ಹಸ್ತೆ ಸರಸ್ವತಿಃ
WD

ಜ್ಞಾನ ಶಕ್ತಿಯನ್ನು ಪ್ರತಿನಿಧಿಸುವ ಸರಸ್ವತಿ, ದೈಹಿಕ ಪರಿಪೂರ್ಣತೆ ಮತ್ತು ಸೌಂದರ್ಯದ ಪ್ರತೀಕ. ಶರತ್ಕಾಲದ ಚಂದ್ರನಂತೆ ಶ್ವೇತ ವರ್ಣದಲ್ಲಿ ಮಿನುಗುವ ಮಹಾಸರಸ್ವತಿ, ತನ್ನ ಎಂಟು ಕೈಗಳಲ್ಲಿ ಗಂಟೆ,ತ್ರಿಶೂಲ, ನೆಗಿಲು, ಶಂಖ, ಚಕ್ರಧಾರಿಯಾಗಿ ನಿಂತಿದ್ದಾಳೆ.

ಇಲ್ಲಿನ ಮೂರು ಶಕ್ತಿಗಳ ಮೂಲ ಶಕ್ತಿ ಮಹೇಶ್ವರಿ ಅಥವಾ ರಾಜ ರಾಜೇಶ್ವರಿ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತೀಯ ಅರ್ಚಕರ ಪ್ರಕಾರ ಲಲಿತ ತ್ರಿಪುರ ಸುಂದರಿ ಎಂದು ಕರೆಯಲಾಗುತ್ತದೆ. ಲಲಿತ ಶಬ್ದದ ಅರ್ಥ ಸೌಂದರ್ಯ.

ತ್ರಿಶಕ್ತಿ ಮಂದಿರ ವಿಜಯವಾಡ ನಗರದ ಹೃದಯ ಭಾಗದಲ್ಲಿದೆ. ರೈಲ್ವೆ ಸ್ಟೇಷನ್‌ದಿಂದ ಹತ್ತು ನಿಮಿಷದ ಪ್ರಯಾಣ. ಹೈದಾರಾಬಾದ್ ಮತ್ತು ವಿಜಯವಾಡದ ನಡುವೆ 275 ಕಿಮಿ ಅಂತರವಿದ್ದು ದೇಶದ ಪ್ರಮುಖ ಭಾಗಗಳಿಂದ ರೈಲು ವಿಮಾನ ರಸ್ತೆ ಸಂಪರ್ಕ ಹೊಂದಿದೆ.