ಸಂಗೀತ ಸಾಮ್ರಾಟ್ ಬಟೂಕ ಭೈರವ

ಅರವಿಂದ್ ಶುಕ್ಲಾ
WD

ಇದು ಲಕ್ನೋ ನಗರಕ್ಕೆ ತೀರ ಸಮಿಪ ಇರುವ ಕನಸ್ರಾಬಾಗ್‌ದಲ್ಲಿ ಇರುವ ಸಂಗೀತ ಸಾಮ್ರಾಟ್, ಗಾನಪ್ರಿಯ ಬಟೂಕ ಭೈರವನ ಕಥೆ. ಲಯಕರ್ತೃ ಶಿವನು ಸಂಗೀತ ಮತ್ತು ನಾಟ್ಯ ಪ್ರಿಯ ಅದರಂತೆ ಮದ್ಯಪ್ರಿಯನು ಹೌದು. ಈ ಮಂದಿರಕ್ಕೆ ಭಕ್ತರು ಸೇರಿದಂತೆ ಸಂಗೀತಾರಾಧಕರು ಮತ್ತು ಸಂಗೀತ ಕಲೆಯ ಉಪಾಸಕರು ಬರುವುದು ವಾಡಿಕೆ.

ಸಂಗೀತಕ್ಕೆ ಮತ್ತು ಕಥಕ್ ನೃತ್ಯಕ್ಕೆ ಹೆಸರು ಮಾಡಿರುವ ಇದು ಕಥಕ್ ಘರಾನಾದ ಮೂಲ ಎಂದು ಪ್ರತೀತಿ ಇದೆ. ಹಿಂದೂಸ್ತಾನಿ ಸಂಗೀತದಲ್ಲಿ ಘರಾನಾ ಶಬ್ದ ಬಳಕೆಯಲ್ಲಿದ್ದು. ವಿಶಿಷ್ಟ ರೀತಿಯ ಸಂಗೀತವನ್ನು ಅಳವಡಿಸಿಕೊಂಡ ನಂತರ ಬರುವ ಶೈಲಿಗೆ, ಆ ಮನೆತನದ ಇಲ್ಲವೆ, ಆ ಪ್ರದೇಶದ ಹೆಸರನ್ನು ಮುಂದೆ ಸೂಚಿಸುವ ಮೂಲಕ ಆ ಶೈಲಿಯ ಸಂಗೀತದ ವ್ಯುತ್ಪನ್ನದ ಮೂಲವನ್ನು ಘರಾನಾ ಶಬ್ದ ತಿಳಿಸುತ್ತದೆ.

ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಅಂತಿಮ ರವಿವಾರದಂದು ಬಟೂಕ ಭೈರವನ ದೇವಸ್ಥಾನದಲ್ಲಿ ಸಂಗೀತ ಮತ್ತು ನೃತ್ಯ ಕಲಿಯಲು ಇಚ್ಚಿಸುವವರು ಅಂದು ತಮ್ಮ ಅಧ್ಯಯನಕ್ಕೆ ಓಂಕಾರ ಹಾಕುತ್ತಾರೆ. ಅಂದು ನಡೆಯುವ "ಘುಂಘ್ರುವಾಲಿ ರಾತ್" ಸಂಗೀತ ರಸಸಂಜೆಯಲ್ಲಿ ಭೈರವನಿಗೆ ಸೋಮರಸವನ್ನು ನೈವೇಧ್ಯವಾಗಿ ಅರ್ಪಿಸಿ, ಪ್ರಸಾದ ರೂಪದಲ್ಲಿ ಅದನ್ನು ಸ್ವೀಕರಿಸಿ ಸಂಗೀತದ ರಸಾನುಭವವನ್ನು ಭಕ್ತರು ಪಡೆದುಕೊಳ್ಳುತ್ತಾರೆ.
WD

ಭಾದ್ರಪದ ಮಾಸದ ಕೊನೆಯ ರವಿವಾರದಂದು ನಡೆಯುವ "ಘುಂಘ್ರುವಾಲಿ ರಾತ್" ಸಂಗೀತ ಕಾರ್ಯಕ್ರಮ ಒಂದು ರೀತಿಯಲ್ಲಿ ಜಾತ್ರೆಯ ಸ್ವರೂಪ ಪಡೆಯುವುದು ವಾಡಿಕೆ. ಸುಮಾರು 33 ವರ್ಷಗಳ ಭವ್ಯ ಇತಿಹಾಸ ಇರುವ ಕಥಕ್ ಘರಾನಾ ಶೈಲಿಯ ನೃತ್ಯ ಲಕ್ನೋದಲ್ಲಿ ಮರುಜೀವ ಪಡೆಯುತ್ತದೆ. ಲಾಖ್ ನವಿ ಎಂದು ಮೊದಲು ಹೆಸರು ಪಡೆದಿದ್ದ ಲಕ್ನೋ ನಗರ ಇತಿಹಾಸ ಕಾಲದಿಂದಲೂ ಸಂಗೀತ ಕಲೆಗಳ ತವರೂರು ಎಂದು ಬೇರೆ ಹೇಳಬೇಕಾಗಿಲ್ಲ. ಸಾಧುಗಳು, ಸಂತರು ಅಂದು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಬಟೂಕ ಭೈರವನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

WD
ಇನ್ನೂ ಒಂದು ವಿಶೇಷ ಎಂದರೆ, ಅಂದು ಪುಂಗಿಯ ನಾದಕ್ಕೆ ನಾಯಿಗಳ ಊಳಿಡುವಿಕೆ ಮತ್ತು ಹಾವುಗಳ ಹೆಡೆ ಎತ್ತಿ ತಲೆದೂಗುವದನ್ನು ಕಾಣಬಹುದು.

ಇಲ್ಲಿನ ಇತಿಹಾಸ ತಜ್ಞ ಯೋಗೇಶ್ ಪ್ರವೀಣ್ ಪ್ರಕಾರ ಇಲ್ಲಿನ ಬಟೂಕ ಭೈರವನ ದೇವಸ್ಥಾನ ಸುಮಾರು 200 ವರ್ಷಗಳ ಪುರಾತನವಾಗಿದ್ದು, ಬಾಲ ಭೈರವನು ತನ್ನ ಎಳೆವಯಸ್ಸಿನಲ್ಲಿ ನೆಲೆಸಿದ್ದಾನೆ. ಮಂದಿರದ ಗರ್ಭಗುಡಿಯಲ್ಲಿ ಇರುವ ಭೈರವನ ಮೂರ್ತಿ ಸಾವಿರ ವರುಷಗಳಷ್ಟು ಪುರಾತನವಾಗಿದೆ. ಮಂದಿರದ ಪಕ್ಕದಲ್ಲಿ ಗೋಮತಿ ನದಿ ಹರಿಯುತ್ತಿದೆ. ಅಲ್ಲದೇ ಪಕ್ಕದಲ್ಲಿ ರುದ್ರಭೂಮಿಯೂ ಇದೆ. ಈ ಮಂದಿರದ ಜೀರ್ಣೋದ್ಧಾರವನ್ನು ಬಲರಾಮಪುರ್ ಮಹಾರಾಜ್ ಮಾಡಿದ್ದಾರೆ.

ಬಟೂಕ ಭೈರವ ಮಂದಿರ ಕಥಕ್ ನೃತ್ಯ ಕಲಿಯುವವರಿಗೆ ಪುಣ್ಯಭೂಮಿ ಇದ್ದಂತೆ. ಮಂದಿರದ ಪ್ರಾಂಗಣದಲ್ಲಿ ವಾಸವಾಗಿರುವ ಭೈರವ ಪ್ರಸಾದ ಮತ್ತು ಕಾಲ್ಕಾ ಬಿನಾದಿನ್ ಅಂದು ಸಾಂಪ್ರದಾಯಿಕ ವೇಷದಲ್ಲಿ ಘುಂಘ್ರು ಕಥಕ್ ನೃತ್ಯ ಪ್ರದರ್ಶನ ನೀಡುವುದು ವಾಡಿಕೆ.

ನಮಗೆ ಅಚ್ಚರಿಯಾಗಿದ್ದು ಶಂಭೂ ಮಹಾರಾಜ್ ಅವರಂತಹ ಖ್ಯಾತ ಗಾಯಕರು ಇಲ್ಲಿ ಅಂದು ಸೂರದಾಸ್‌ರ ಕೀರ್ತನೆಗಳನ್ನು ಹಾಡುತ್ತಾರೆ. ಅದೇ ದಿನ ಕಥಕ್ ನೃತ್ಯ ಕಲಿಯುವ ವಿದ್ಯಾರ್ಥಿಗಳಿಗೆ ಗೆಜ್ಜೆ ಪೂಜೆ ಕೂಡ ನಡೆಯುವುದುಂಟು ಅಂದು ತಮ್ಮ ಗುರುಗಳ ಎದುರು ಮೊದಲ ಬಾರಿಗೆ ಕಾಲಿಗೆ ಗೆಜ್ಜೆ ಕಟ್ಟಿ ಕಲಿತ ವಿದ್ಯೆಯ ಪ್ರದರ್ಶನ ಮಾಡುತ್ತಾರೆ.

1974 ರಿಂದ ಕಾಣೆಯಾಗಿದ್ದ "ಘುಂಘ್ರುವಾಲಿ ರಾತ್" ಈ ಬಾರಿ ನಡೆದದ್ದು ಸೆಪ್ಟಂಬರ್ 23 ರಂದು. ಅಂದು ಕುಂಕುಮ್ ಆದರ್ಶ ಕಾಲಿಗೆ ಗೆಜ್ಜೆ ಕಟ್ಟಿ ಘುಂಘ್ರುವಾಲಿ ರಾತ್ ಪರಿಕಲ್ಪನೆಯನ್ನು ಸಂಗೀತ ಪ್ರಿಯರಿಗೆ ಉಣಬಡಿಸಿದರು.
WD

ಇದೇ ಮಂದಿರದಲ್ಲಿ ಖ್ಯಾತ ಸಂಗೀತ ವಿದ್ವಾಂಸರಾದ ಬಿರ್ಜು ಮಹಾರಾಜ್, ಕುಂದನ್‌ಲಾಲ್ ಸೆಹಗಲ್ ಮತ್ತು ಸೀತಾರಾ ದೇವಿ ಸಂಗೀತ ಕಾರ್ಯಕ್ರಮ ನೀಡಿದ್ದನ್ನು ಸ್ಥಳೀಯ ನಿವಾಸಿ ಕರ್ನಲ್ ವಿಷ್ಣು ರಾಮ್ ಶ್ರೀವಾಸ್ತವ್ ಅವರು ನೋಡಿದ್ದಾರೆ

ಬಟೂಕ ಭೈರವನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.