ಸಂತ ದಾದಾಜಿ ಧುನಿವಾಲೆ ಕ್ಷೇತ್ರ

ಭೀಕಾ ಶರ್ಮ
WD
ಪೂಜ್ಯ ಸಂತರಲ್ಲಿ ಒಬ್ಬರಾದ ಶಿರಡಿ ಸಾಯಿಬಾಬಾ ಅವರಂತೆ ಸಂತ ದಾದಾ ಧುನಿವಾಲೆ ಅವರನ್ನು ನೆನಪಿಸಿಕೊಳ್ಳಬೇಕಾಗುತ್ತದೆ.ದಾದಾಜಿ ( ಕೇಶವಾನಂದಜೀ ಮಹಾರಾಜ್) ಒಬ್ಬ ದೈವಿ ಸ್ವರೂಪಿ ಸಂತ. ಸದಾ ಪವಿತ್ರ ಅಗ್ನಿಯ(ಧುನಿ) ಎದುರುಗಡೆ ಕುಳಿತಿರುವುದರಿಂದ ಅವರನ್ನು ದಾದಾ( ದಾದಾ ಎಂದರೆ ಅಜ್ಜ ಎಂದರ್ಥ) ಧುನಿವಾಲೆ ಎಂದು ಕರೆಯಲಾಗುತ್ತದೆ.

ದಾದಾ ಧುನಿವಾಲೆಯವರನ್ನು ಶಿವನ ಅವತಾರವೆಂದು ತಿಳಿದು ಭಕ್ತರು ಪೂಜಿಸುತ್ತಾರೆ. ಅವರ ಸಂಪೂರ್ಣ ಚರಿತ್ರೆ ಲಭ್ಯವಾಗದಿದ್ದರೂ ಅನೇಕ ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ ಎಂದು ಭಕ್ತ ಮೂಲಗಳು ಹೇಳುತ್ತವೆ. ದಾದಾ ಧುನಿವಾಲೆ ಅವರ ಸಮಾಧಿಯ ಹತ್ತಿರ ದಾದಾ ದರ್ಬಾರ್ ಇದೆ.
WD


ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿರುವ ಭಕ್ತರು ಗುರು ಪೂರ್ಣಿಮಾ ದಿನದಂದು ಆಗಮಿಸಿ ಭಕ್ತಿಯಿಂದ ಪೂಜೆಯನ್ನು ನೆರವೆರಿಸುತ್ತಾರೆ. ಪೂಜೆ ,ಪ್ರಾರ್ಥನೆ, ಧಾರ್ಮಿಕ ಚಟುವಟಿಕೆಗಳಿಗಾಗಿ ದೇಶದಲ್ಲಿ ಒಟ್ಟು 27 ಧಾಮಗಳಿವೆ. ಧಾಮಗಳಲ್ಲಿ ದಾದಾ ಧುನಿವಾಲೆ ಅವರ ಕಾಲದಿಂದಲೂ ಪವಿತ್ರ ಅಗ್ನಿ ಉರಿಯುತ್ತಿರುತ್ತದೆ. 1930ರಲ್ಲಿ ದಾದಾ ಧುನಿವಾಲೆಯವರು ಖಾಂಡವಾ ನಗರದಿಂದ ಮೂರು ಕಿ.ಮಿ. ದೂರದಲ್ಲಿರುವ ದಕ್ಷಿಣ ದಿಕ್ಕಿನಲ್ಲಿ ಸಮಾಧಿಯಾಗಿದ್ದಾರೆ.

ಛೋಟೆ ದಾದಾಜೀ (ಸ್ವಾಮಿ ಹರಿಹರಾನಂದಜೀ)
WD
ರಾಜಸ್ಥಾನದ ಶ್ರೀಮಂತ ಕುಟುಬಂದ ವ್ಯಕ್ತಿ ಭಂವರಲಾಲ್ ದಾದಾಜೀಯವರನ್ನು ಭೇಟಿ ಮಾಡಲು ಆಗಮಿಸಿದರು. ಭೇಟಿಯ ನಂತರ ದಾದಜೀಯವರ ಪ್ರಬಾವಕ್ಕೆ ಒಳಗಾದ ಭಂವರಲಾಲ್ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಅಲ್ಲೇ ನೆಲಸಿದರು.

ಸುಸಂಸ್ಕೃತ ವ್ಯಕ್ತಿತ್ವ ಹೊಂದಿದ ಭಂವರಲಾಲ್ ವಿಷ್ಣುವಿನ ಅವತಾರವೆಂದು ಭಕ್ತ ಸಮೂಹ ಅವರನ್ನು ಪೂಜಿಸುತ್ತದೆ. ಅವರನ್ನು ಛೋಟೆ ದಾದಾಜೀಯೆಂದು ಕರೆಯಲಾಗುತ್ತದೆ.ದಾದಾ ಧುನಿವಾಲೆಯವರ ನಂತರ ಅವರ ಕಾರ್ಯವನ್ನು ಯಶಸ್ವಿಯಾಗಿ ನೇರವೆರಿಸಿಕೊಂಡು ಬಂದು 1942 ರಲ್ಲಿ ಅನಾರೋಗ್ಯದ ಬಳಿಕ ಸಮಾಧಿಯಾದರು.

ತಲುಪುವುದು ಹೇಗೆ
ಖಾಂಡ್ವಾ ನಗರಕ್ಕೆ ರಸ್ತೆ ಹಾಗೂ ರೈಲಿನ ಉತ್ತಮ ಸಂಪರ್ಕವಿದೆ. ಸಮೀಪದ ವಿಮಾನ ನಿಲ್ದಾಣ ಇಂದೋರ್ (140 ಕಿ.ಮಿ.)