ಸೌರಾಷ್ಟ್ರ ಸೋಮನಾಥ

WD
ಸ್ಕಂದ ಪುರಾಣ, ಶ್ರೀಮದ್ ಭಗವದ್ ಗೀತಾ ಮತ್ತು ಶಿವಪುರಾಣಗಳಲ್ಲಿ ಉಲ್ಲೇಖವಾಗಿರುವ ಸೋಮನಾಥ ಅಥವಾ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಬರುವ ಸೌರಾಷ್ಟ್ರ ಸೋಮನಾಥ ದೇವಸ್ದಾನದ ಐತಿಹ್ಯ ಮತ್ತು ಪೌರಾಣಿಕ ಹಿನ್ನೆಲೆ ಈ ಬಾರಿ ಧಾರ್ಮಿಕ ಯಾತ್ರೆಯ ಕಥಾವಸ್ತು...

ಋಗ್ವೇದದಲ್ಲಿ ಹೇಳಲಾಗಿರುವ ಶ್ಲೋಕದಲ್ಲಿ ಭಗವಾನ್ ಸೋಮೇಶ್ವರನು ಗಂಗೆ, ಯುಮುನೆ ಮತ್ತು ಗುಪ್ತಗಾಮಿನಿ ಸರಸ್ವತಿಯೊಂದಿಗೆ ಇಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ಮಹ್ಮದ್ ಘಜ್ನಿಯ ದಾಳಿಗೆ 17 ಬಾರಿಗೆ ಒಳಗಾದರೂ ಇಂದಿಗೂ ಸೋಮನಾಥ ದೇವಸ್ಥಾನ ಅದೇ ಗಾಂಭೀರ್ಯದಿಂದ ನಿಂತಿರುವುದು ಹಿಂದೂ ಧರ್ಮದಲ್ಲಿ ಈ ಪವಿತ್ರ ಕ್ಷೇತ್ರಕ್ಕೆ ಇರುವ ಮಹತ್ವವನ್ನು ಸೂಚಿಸುತ್ತದೆ.

17ನೇ ಭಾರಿ ನಿರ್ಮಾಣಗೊಂಡಿರುವ ಸೋಮನಾಥ ದೇವಸ್ಥಾನವು ಕೈಲಾಸ ಮಹಾಮೇರು ಪ್ರಸಾದ ಶೈಲಿಯಲ್ಲಿದ್ದು. ಸ್ವಾತಂತ್ರ್ಯಾನಂತರ ದೇವಸ್ಥಾನದ ಪುನರುಜ್ಜೀವನಗೊಳ್ಳಲು ಉಕ್ಕಿನ ಮನುಷ್ಯ ಎಂದು ಹೆಸರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಕಾರಣರು.

WD
ದೇವಸ್ಥಾನವು ಗರ್ಭಗೃಹ, ನೃತ್ಯ ಮಂಟಪ ಮತ್ತು 150 ಅಡಿ ಎತ್ತರದ ಶಿಖರವನ್ನು ಹೊಂದಿದ್ದು, ಶಿಖರ 10 ಟನ್ ಭಾರವಿದೆ. ಆಬಾಧಿತ ಸಮುದ್ರ ಮಾರ್ಗ ಮತ್ತು ತೀರ್ಥ ಸ್ಥಂಭದವರೆಗೆ ಇರುವ ಗುಪ್ತ ಮಾರ್ಗವು ಭಾರತೀಯರ ಕಾಲ ನೈಪುಣ್ಯತೆಯನ್ನು ಸಾರಿ ಹೇಳುತ್ತದೆ.

ಪೌರಾಣಿಕ ಹಿನ್ನೆಲೆ

ಚಂದ್ರ ಎಂದೂ ಕರೆಯಲ್ಪಡುವ ಸೋಮನು ದಕ್ಷ ಬ್ರಹ್ಮನ ಅಳಿಯ ಎಂದು ಪುರಾಣಗಳು ಹೇಳುತ್ತವೆ. ಒಂದು ದಿನ ಚಂದ್ರ (ಸೋಮ) ಮಾವನಾದ ದಕ್ಷನ ಅಪ್ಪಣೆಯನ್ನು ಪಾಲಿಸಲಿಲ್ಲ. ಇದರಿಂದ ಕುಪಿತಗೊಂಡ ದಕ್ಷ "ನೀನು ನಿನ್ನ ಕಾಂತಿಯನ್ನು ಕಳೆದುಕೊ" ಎಂದು ಶಾಪ ನೀಡಿದನು. ಶಾಪದ ಪರಿಣಾಮವಾಗಿ ನಿತ್ಯ ಬೆಳದಿಂಗಳು ಸೂಸುತ್ತಿದ್ದ ಚಂದ್ರನು ತನ್ನ ಕಾಂತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದನು. ಚಂದ್ರನ ಕಾಂತಿ ಕಳೆದುಹೊಗುತ್ತಿರುವುದರಿಂದ ಭಯಗೊಂಡ ದೇವತೆಗಳು ಶಾಪವನ್ನು ಹಿಂದಕ್ಕೆ ಪಡೆಯುವಂತೆ ದಕ್ಷನನ್ನು ವಿನಂತಿಸಿದರು. ಶಾಪ ವಿಮೋಚನೆಯಾಗಬೇಕಾದರೆ ಗುಪ್ತಗಾಮಿನಿ ಸರಸ್ವತಿ ಸಮುದ್ರ ಸೇರುವ ಸ್ಥಳದಲ್ಲಿ ಸ್ನಾನ ಮಾಡಿ ಈಶ್ವರನನ್ನು ಪ್ರಾರ್ಥಿಸಿ ಬೇಡಿಕೋ, ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಿದನು.

WD
ಶಾಪ ವಿಮೋಚನೆಗಾಗಿ ಸರಸ್ವತಿಯಲ್ಲಿ ಚಂದ್ರನು ಮಿಂದು ಪರಶಿವನನ್ನು ಬೇಡಿಕೊಂಡ ನಂತರ ಚಂದ್ರನ ಶಾಪ ವಿಮೋಚನೆಗೊಂಡಿತು. ಸೋಮನ ಶಾಪ ವಿಮೋಚನೆ ಮಾಡಿದ ಕಾರಣಕ್ಕೆ ಶಿವನಿಗೆ ಸೋಮನಾಥ ಎಂದು ಹೆಸರು ಬಂದಿತು.

ತಲುಪುವುದು ಹೇಗೆ:

ವಿಮಾನ: ಹತ್ತಿರದ ವಿಮಾನ ನಿಲ್ದಾಣ ಕೆಶೋಡ್ 55ಕಿ.ಮಿ

ರೈಲು: ವರವಾಲ್ ನಿಲ್ದಾಣ ಕೇವಲ ಏಳು ಕಿ.ಮಿ.

ರಸ್ತೆ: ದೇಶದ ಪ್ರಮುಖ ನಗರಗಳಿಂದ ನೇರ ಸಂಪರ್ಕ.