ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆಯೇ?

ಮಂಗಳವಾರ, 21 ಜೂನ್ 2016 (20:07 IST)
ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿರುವುದು ಅಮೆರಿಕಾದಲ್ಲಿ ಇತ್ತೀಚೆಗೆ ಚರ್ಚೆಯ ವಸ್ತುವಾಗಿತ್ತು. ಭಾರತವು ಬಹು ಧರ್ಮಗಳ ದೇಶವಾಗಿದ್ದು ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಶ್ರೇಷ್ಟ ಧರ್ಮವೆಂದು ಭಾವಿಸುತ್ತಾರೆ. ಹಿಂದೂ ಧರ್ಮದಷ್ಟು ಶ್ರೇಷ್ಟ ಧರ್ಮವಿಲ್ಲವೆಂದು ಹಿಂದೂಗಳು ಭಾವಿಸುತ್ತಾರೆ. ಮುಸ್ಲಿಮರು ತಮ್ಮ ಧರ್ಮವೇ ಶ್ರೇಷ್ಟವೆಂದು ಕಾಯಾ, ವಾಚಾ ಮನಸಾ ಅವರ ದೇವರನ್ನು ಪ್ರಾರ್ಥಿಸುತ್ತಾರೆ.

 ಕ್ರೈಸ್ತರು ಕೂಡ ಏಸುಕ್ರಿಸ್ತನ ಪ್ರಾರ್ಥನೆ ಮಾಡುತ್ತಾರೆ. ಆದರೆ ಅವರವರ ಧಾರ್ಮಿಕ ಆಚರಣೆಗೆ ಯಾರೂ ಅಡ್ಡಿ, ಆತಂಕಗಳನ್ನು ಉಂಟುಮಾಡದೇ ನಿರಾತಂಕವಾಗಿ ಇರುವುದೇ ಧಾರ್ಮಿಕ ಸಹಿಷ್ಣುತೆ. ಆದರೆ ಒಂದು ಧರ್ಮದವರು ಮತಾಂತರ ಪ್ರಕ್ರಿಯೆಯಲ್ಲಿ ನಿರತರಾದ ಸಂದರ್ಭದಲ್ಲಿ ಬೇರೆ ಧರ್ಮಗಳಿಗೆ ಅಸಹನೀಯವೆನಿಸುತ್ತದೆ.

ಅಂತಹ ಸಂದರ್ಭಗಳಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತದೆ. ತಮ್ಮ ಧರ್ಮನಿಷ್ಠೆಗೆ ಧಕ್ಕೆ ಬರುತ್ತದೆಂದು ಭಾವಿಸಿದಾಗ ಇತರೆ ಧರ್ಮಗಳ ಪೂಜಾಮಂದಿರಗಳನ್ನು ಹಾಳುಮಾಡುವ, ಧಾರ್ಮಿಕ ನಿಂದನೆ ಮಾಡುವ ಕ್ರಿಯೆಗಳು ಜರುಗುತ್ತವೆ. ಒಂದು ಧರ್ಮದ ಯುವತಿಯ ಮೇಲೆ ಇನ್ನೊಂದು ಧರ್ಮದ ಯುವಕ ಲೈಂಗಿಕ ದೌರ್ಜನ್ಯ ನಡೆಸಿದಾಗ ಇದನ್ನು ಧಾರ್ಮಿಕ ನಿಂದನೆಯಂತೆ ಜನರು ಪರಿಗಣಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತದೆ. 
 
ಸರ್ವೋ ಧರ್ಮ ಸದ್ಗತಿ ಭವ, ಸರ್ವೋ ಜನ ಸುಖಿನೋಭವಂತು ಎಂಬ ನುಡಿಯನ್ನು ಜನರು ಆಚರಿಸಿದರೆ ಧಾರ್ಮಿಕ ಅಸಹಿಷ್ಣುತೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ