ಸೆನ್ಸೆಕ್ಸ್: 486 ಪಾಯಿಂಟ್‌ಗಳ ಏರಿಕೆ ಕಂಡ ಶೇರುಪೇಟೆ ಸಂವೇದಿ ಸೂಚ್ಯಂಕ
ಗುರುವಾರ, 26 ಮೇ 2016 (17:29 IST)
ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರ ಏರಿಕೆ ಮತ್ತು ದೇಶಿಯ ಕಂಪೆನಿಗಳ ನಿವ್ವಳ ಲಾಭದಲ್ಲಿ ಚೇತರಿಕೆ ಕಂಡಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 485.51 ಪಾಯಿಂಟ್‌ಗಳ ಏರಿಕೆ ಕಂಡಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 134.75 ಪಾಯಿಂಟ್‌ಗಳ ಏರಿಕೆ ಕಂಡು 8,069.65 ಅಂಕಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಮತ್ತು ಉತ್ತಮ ಮುಂಗಾರು ಮಳೆ ಹವಾಮಾನ ವರದಿ ಹಾಗೂ ಇರಾನ್‌ನ ಚಬಹಾರ್ ಬಂದರು ಒಪ್ಪಂದ ಶೇರುಪೇಟೆ ಚೇತರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 485.51 ಪಾಯಿಂಟ್‌ಗಳ ಏರಿಕೆ ಕಂಡು 25,881.17 ಅಂಕಗಳಿಗೆ ತಲುಪಿದೆ
ಲಾರ್ಸನ್ ಆಂಡ್ ಟೌಬ್ರೋ ಮತ್ತು ಗೇಲ್ ಇಂಡಿಯಾ ಕಂಪೆನಿಗಳ ನಾಲ್ಕನೇ ತ್ರೈಮಾಸಿಕ ಆದಾಯ ನಿರೀಕ್ಷೆಯಂತೆ ಬಂದಿದ್ದರಿಂದ ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿದೆ ಎಂದು ಶೇರುಪೇಟೆ ಮೂಲಗಳು ತಿಳಿಸಿವೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.