ಅಮೆರಿಕ ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ: ಗಗನಕ್ಕೇರಿದ ಶೇರುಪೇಟೆ ಸೂಚ್ಯಂಕ

ಮಂಗಳವಾರ, 6 ಸೆಪ್ಟಂಬರ್ 2016 (17:29 IST)
ಅಮೆರಿಕದ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಳಗೊಳಿಸಿದ ಹಿನ್ನೆಲೆಯಲ್ಲಿ ಶೇರುಪೇಟೆ ಸೂಚ್ಯಂಕ 17 ತಿಂಗಳ ಗರಿಷ್ಠ ಏರಿಕೆ ಕಂಡು 446 ಪಾಯಿಂಟ್‌ಗಳಿಗೆ ತಲುಪಿದೆ
 
ವಾಹನೋದ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಶೇರುಗಳ ಖರೀದಿಗೆ ಹೂಡಿಕೆದಾರರು ಮುಂದಾಗಿದ್ದರಿಂದ ನಿಫ್ಟಿ ಸೂಚ್ಯಂಕ ಕೂಡಾ 133.25 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಅಮೆರಿಕದ ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ ಮತ್ತು ಉರ್ಜಿತ್ ಪಟೇಲ್ ಆರ್‌ಬಿಐ ಗವರ್ನರ್ ಆಗಿ ಅಧಿಕಾರಿ ಸ್ವೀಕರಿಸಿರುವುದು ಶೇರುಪೇಟೆ ಚೇತರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. 
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 445.91 ಪಾಯಿಂಟ್‌ಗಳ ಏರಿಕೆ ಕಂಡು 29,013.40 ಅಂಕಗಳಿಗೆ ತಲುಪಿದೆ. 
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 133.35 ಪಾಯಿಂಟ್‌ಗಳ ಏರಿಕೆ ಕಂಡು 8,943.00 ಅಂಕಗಳಿಗೆ ತಲುಪಿದೆ.
 
ವಾಹನೋದ್ಯಮ, ಬ್ಯಾಂಕಿಂಗ್, ಗೃಹೋಪಕರಣ ವಸ್ತುಗಳು, ವಿದ್ಯುತ್, ರಿಯಲ್ಟಿ, ಉಕ್ಕು, ತೈಲ ಮತ್ತು ಅನಿಲ ಹಾಗೂ ಎಫ್‌ಎಂಸಿಜಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 
ಏಷ್ಯಾ ಮಾರುಕಟ್ಟೆಗಳಾದ ಜಪಾನ್‌ನ ನಿಕೈ ಶೇರುಪೇಟೆ ಶೇ.0.26 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.58 ರಷ್ಟು ಏರಿಕೆಯಾಗಿದೆ. ಶಾಂಘೈ ಶೇರುಪೇಟೆ ಕೂಡಾ ಶೇ.0.61 ರಷ್ಟು ಚೇತರಿಕೆ ಕಂಡಿದೆ.
 
ಯುರೋಪ್ ಮಾರುಕಟ್ಟೆಗಳಾದ ಲಂಡನ್, ಪ್ಯಾರಿಸ್, ಫ್ರಾಂಕ್‌ಫರ್ಟ್ ಶೇರುಪೇಟೆಗಳು ಇಂದಿನ ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ