ಸೆನ್ಸೆಕ್ಸ್: ಮೂರು ತಿಂಗಳ ಗರಿಷ್ಠ 576 ಪಾಯಿಂಟ್‌ಗಳ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಬುಧವಾರ, 25 ಮೇ 2016 (18:29 IST)
ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ ಮೂರು ತಿಂಗಳ ಗರಿಷ್ಠ 576 ಪಾಯಿಂಟ್‌ಗಳ ಚೇತರಿಕೆ ಕಂಡಿದೆ.
 
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆಯಾಗಿರುವುದು ಕೂಡಾ ಶೇರುಪೇಟೆ ಚೇತರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 575.70 ಪಾಯಿಂಟ್‌ಗಳ ಗರಿಷ್ಠ ಏರಿಕೆ ಕಂಡು 25,432.10 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 186.05 ಪಾಯಿಂಟ್‌ಗಳ ಏರಿಕೆ ಕಂಡು 7,941.20 ಅಂಕಗಳಿಗೆ ತಲುಪಿದೆ.
 
ಎಲ್‌ಆಂಡ್‌‍ಟಿ, ಮಾರುತಿ, ಎಸ್‌ಬಿಐ, ಎಚ್‌ಡಿಎಫ್‌ಸಿ ಲಿಮಿಟೆಡ್, ಎಚ್‌ಡಿಎಫ್‌ಸಿ ಬ್ಯಾಂಕ್, ಗೇಲ್, ಏಷ್ಯನ್ ಪೇಂಟ್ಸ್, ಎಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ, ಟಿಸಿಎಸ್, ಐಟಿಸಿ ಲಿಮಿಟೆಡ್, ಟಾಟಾ ಸ್ಟೀಲ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 
ಬಂಡವಾಳ ವಸ್ತುಗಳು, ಐಟಿ, ತಂತ್ರಜ್ಞಾನ, ವಿದ್ಯುತ್, ತೈಲ ಮತ್ತು ಅನಿಲ, ಎಫ್‌ಎಂಸಿಜಿ, ಮೂಲಸೌಕರ್ಯ, ವಾಹನೋದ್ಯಮ, ಉಕ್ಕು ಕ್ಷೇತ್ರಗಳ ಶೇರುಗಳ ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ