ಬೆಂಗಳೂರು: ಇಂದು ಮಹಾಶಿವರಾತ್ರಿ. ಮಾಘಮಾಸದಲ್ಲಿ ಬರುವ ಈ ದಿನ ಶಿವ ಭಕ್ತರಿಗೆ ವಿಶೇಷ ದಿನ. ಇಡೀ ದಿನ ಭಕ್ತಿಯಿಂದ ಶಿವನ ನಾಮ ಸ್ಮರಣೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಭಕ್ತರದ್ದು.
ಶಿವರಾತ್ರಿಯೆಂದರೆ ರಾತ್ರಿಯಿಡೀ ಉಪವಾಸವಿದ್ದು, ಶಿವನಾಮ ಸ್ಮರಣೆಯಲ್ಲಿ ತೊಡಗುವುದು ಇಂದಿನ ವಿಶೇಷತೆ. ಅದಕ್ಕಾಗಿ ಉಪವಾಸ ಯಾಕೆ? ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಇದಕ್ಕೆ ಕಾರಣ ಶಿವ ಧ್ಯಾನ ಪ್ರಿಯ.
ಧ್ಯಾನ ಮಾಡುವಾಗ ಮನಸ್ಸು, ದೇಹ ಶುದ್ಧವಾಗಿರಬೇಕೆಂಬ ಕಾರಣಕ್ಕೆ ಅಂದಿನ ದಿನ ಉಪವಾಸ ಇರಬೇಕು ಎನ್ನಲಾಗುತ್ತದೆ. ಆಹಾರವನ್ನೇ ಸೇವಿಸದಿದ್ದರೆ, ಯಾವುದೇ ವಿಷಾಹಾರ, ವಿಷಾನಿಲ ನಮ್ಮ ದೇಹವನ್ನು ಸೇರಿಕೊಳ್ಳದು ಎಂಬುದು ವೈಜ್ಞಾನಿಕವಾಗಿಯೇ ದೃಢಪಟ್ಟಿದೆ. ಹೀಗಾಗಿ ವ್ಯರ್ಜ್ಯ ಆಹಾರ ಸೇವಿಸದೆ ಸಂಪೂರ್ಣ ಶುದ್ಧರಾಗಿ ಶಿವ ಸ್ಮರಣೆ ಮಾಡಿ ಎಂದು ಉಪವಾಸದಲ್ಲಿದ್ದು, ರಾತ್ರಿಯಿಡೀ ಭಜನೆ ಮಾಡುತ್ತಿರಿ ಎನ್ನುತ್ತಾರೆ ಹಿರಿಯರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ