ಝೀ ಟಿವಿಯಲ್ಲಿ ರಂಭಾ 'ಕುಣಿಯೋಣು ಬಾರಾ'

PR
ಮಾದಕ ಮೈಮಾಟದಿಂದ ಮನೆ ಮಾತಾಗಿ, ಇತ್ತೀಚಿನ ವರ್ಷಗಳಲ್ಲಿ ಮೂಲೆಗುಂಪಾಗಿದ್ದ ರಂಭಾ ಮತ್ತೆ ಬಂದಿದ್ದಾರೆ. ಆದರೆ ಈ ಬಾರಿ ಅವರದ್ದು ನಟನೆಯಲ್ಲ. ಬದಲಿಗೆ ಟಿವಿ ರಿಯಾಲಿಟಿ ಶೋದಲ್ಲಿ ಜಡ್ಜ್. ಝೀ ಟಿವಿಯ 'ಕುಣಿಯೋಣು ಬಾರಾ' ಗ್ರಾಂಡ್ ಫಿನಾಲೆಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜಗ್ಗೇಶ್ ನಾಯಕರಾಗಿದ್ದ 'ಸರ್ವರ್ ಸೋಮಣ್ಣ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ರಂಭಾ ಪಂಚಭಾಷಾ ತಾರೆ. ಕೆಲವು ವರ್ಷಗಳ ಹಿಂದೆ ಉದ್ಯಮಿ ಇಂದ್ರನ್ ಪದ್ಮನಾಭನ್‌ರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಕಣ್ಮರೆಯಾಗಿದ್ದರು. ಆದರೆ ತಮಿಳು, ತೆಲುಗು ಟಿವಿ ರಿಯಾಲಿಟಿ ಶೋಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು.

ಈಗ ಕನ್ನಡದತ್ತ ತನ್ನ ಪ್ರಯಾಣ ಬೆಳೆಸಿದ್ದಾರೆ. ಝೀ ಟಿವಿಯ ಜನಪ್ರಿಯ ರಿಯಾಲಿಟಿ ಡ್ಯಾನ್ಸಿಂಗ್ ಶೋ ಕುಣಿಯೋಣು ಬಾರಾದ ಫೈನಲ್‌ಗೆ ತೀರ್ಪುಗಾರ್ತಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ದೀಪಾವಳಿ ಸಂಭ್ರಮದ ನಡುವೆ ಅಕ್ಟೋಬರ್ 27 ಮತ್ತು 28ರಂದು ರಾತ್ರಿ ಒಂಬತ್ತು ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಕುಣಿಯೋಣು ಬಾರಾ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ರಂಭಾ ವಿಶೇಷ ಅತಿಥಿಯೂ ಹೌದು. ಹಾಡೊಂದಕ್ಕೆ ಹೆಜ್ಜೆ ಕೂಡ ಹಾಕಿದ್ದಾರಂತೆ.

90ರ ದಶಕದ ಸರ್ವರ್ ಸೋಮಣ್ಣ ಚಿತ್ರವನ್ನು ನಿರ್ಮಿಸಿದ್ದು ದ್ವಾರಕೀಶ್. ಇದರಲ್ಲಿ ಬ್ರೇಕ್ ಪಡೆದ ರಂಭಾ ನಂತರ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿಯಾದರು. ಓ ಪ್ರೇಮವೇ, ಭಾವ ಬಾಮೈದ, ಸಾಹುಕಾರ, ಪಾಂಡುರಂಗ ವಿಠಲ, ಅನಾಥರು, ಗಂಡುಗಲಿ ಕುಮಾರರಾಮ ಮುಂತಾದ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ