ಕಿರುತೆರೆಗೆ ಮತ್ತೆ ನಂ.1 ಆದ ಈ ಹಳೆಯ ಚಾನೆಲ್

ಶುಕ್ರವಾರ, 8 ಮೇ 2020 (09:18 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ಕನ್ನಡ ಕಿರುತೆರೆ ಮೇಲೂ ಹೊಡೆತ ನೀಡಿದೆ. ಹೊಸ ಕಾರ್ಯಕ್ರಮಗಳಿಲ್ಲದೇ ಕಿರುತೆರೆ ವಾಹಿನಿಗಳು ಟಿಆರ್ ಪಿ ಗಳಿಸಲು ಒದ್ದಾಡುತ್ತಿವೆ.


ಈ ನಡುವೆ ಇದುವರೆಗೆ ನಂ.1 ಆಗಿದ್ದ ಜೀ ಕನ್ನಡ ತನ್ನ ಪಟ್ಟ ಜಾರಿಸಿಕೊಂಡಿದ್ದು, ಮತ್ತೆ ಹಳೆಯ ಮನರಂಜನಾ ವಾಹಿನಿ ಉದಯ ಟಿವಿ ಕಿರುತೆರೆಗೆ ನಂ.1 ಆಗಿದೆ. ಇದುವರೆಗೆ ಮೂರನೇ ಸ್ಥಾನದಲ್ಲಿದ್ದ ಉದಯ ಈಗ ಮತ್ತೆ ನಂ.1 ಸ್ಥಾನಕ್ಕೇರಿದೆ.

ಜೀ ಕನ್ನಡ ದ್ವಿತೀಯ, ಕಲರ್ಸ್ ವಾಹಿನಿ ತೃತೀಯ ಮತ್ತು ಸ್ಟಾರ್ ಸುವರ್ಣ ವಾಹಿನಿ ನಾಲ್ಕನೇ ಸ್ಥಾನ ಪಡೆದಿದೆ. ಹೊಸ ಎಪಿಸೋಡ್ ಗಳಿಲ್ಲದೇ ಜೀ, ಕಲರ್ಸ್, ಸ್ಟಾರ್ ಸುವರ್ಣ ವಾಹಿನಿಗಳು ಒದ್ದಾಡುತ್ತಿದ್ದರೆ, ಇತ್ತ ಉದಯ ವಾಹಿನಿ ಸದ್ದಿಲ್ಲದೇ ಸೂಪರ್ ಹಿಟ್ ತಮಿಳು, ತೆಲುಗು ಡಬ್ಬಿಂಗ್ ಸಿನಿಮಾಗಳನ್ನು ಪ್ರಸಾರ ಮಾಡಿ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ