ಮರೆತೇ ಹೋಗಿದ್ದ ಧಾರವಾಹಿಗಳ ಕತೆ ನೆನಪಿಸಲು ಕಿರುತೆರೆ ವಾಹಿನಿಗಳ ಪ್ಲ್ಯಾನ್

ಶುಕ್ರವಾರ, 8 ಮೇ 2020 (09:03 IST)
ಬೆಂಗಳೂರು: ಧಾರವಾಹಿಗಳ ಹೊಸ ಎಪಿಸೋಡ್ ಗಳು ನಿಂತು ಒಂದು ತಿಂಗಳ ಮೇಲಾಗಿದೆ. ಜನರಿಗೆ ಈಗ ಕೊನೆಯ ಬಾರಿಗೆ ಕತೆ ಎಲ್ಲಿಯವರೆಗೆ ಬಂದಿತ್ತು ಎಂಬುದೇ ಮರೆತು ಹೋಗುವಷ್ಟು ಕಾಲವಾಗಿದೆ.


ಹೀಗಾಗಿ ಮರಳಿ ಆರಂಭಿಸುವ ಸವಾಲು ಕಿರುತೆರೆ ವಾಹಿನಿಗಳದ್ದು. ಜನರಿಗೆ ತಮ್ಮ ನೆಚ್ಚಿನ ಧಾರವಾಹಿಗಳ ಕತೆ ಎಲ್ಲಿಯವರೆಗೆ ಬಂದು ತಲುಪಿತ್ತು ಎಂದು ನೆನಪಿಸಲು ಕಿರುತೆರೆ ವಾಹಿನಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿವೆ.

ಫೇಸ್ ಬುಕ್, ಇನ್ ಸ್ಟಾಗ್ರಾಂ ಮುಖಾಂತರ ಕಿರುತೆರೆ ವಾಹಿನಿಗಳು ಧಾರವಾಹಿಗಳು ಇಲ್ಲಿಯವರೆಗಿನ ಕತೆಯನ್ನು ಶಾರ್ಟ್ ಆಗಿ ಪ್ರಕಟಿಸುತ್ತಿವೆ. ಈ ಮೂಲಕ ಮತ್ತೆ ಶುರು ಮಾಡುವಾಗ ವೀಕ್ಷಕರಿಗೆ ಕಂಟಿನ್ಯೂಟಿ ಸಿಗಲಿ ಎಂಬುದು ಇದರ ಹಿಂದಿನ ಉದ್ದೇಶ. ಆದರೆ ಮೇ 25 ರ ನಂತರವೇ ಶೂಟಿಂಗ್ ಆರಂಭವಾಗಲಿದ್ದು, ಮೇ ಅಂತ್ಯದ ವಾರದಲ್ಲಷ್ಟೇ ಹೊಸ ಎಪಿಸೋಡ್ ಗಳನ್ನು ನೋಡುವ ಭಾಗ್ಯ ವೀಕ್ಷಕರಿಗೆ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ