ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಜಗನ್ ಹೋಗಿದ್ದೆಲ್ಲಿಗೆ?

ಮಂಗಳವಾರ, 9 ಜನವರಿ 2018 (08:42 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ತನ್ನ ಮುಂಗೋಪದಿಂದಲೇ ಜನಪ್ರಿಯತೆ ಕಳೆದುಕೊಂಡು ಎಲಿಮಿನೇಟ್ ಆದ ಜಗನ್ ಅಲಿಯಾಸ್ ಜಗನ್ನಾಥ್ ಚಂದ್ರಶೇಖರ್ ಈಗ ಎಲ್ಲಿದ್ದಾರೆ?
 

ಕೆಲ ದಿನಗಳ ಕಾಲ ಸ್ನೇಹಿತರ ಜತೆ ಇಲ್ಲೇ ಸುತ್ತಮುತ್ತ ಸುತ್ತಾಡಿದ ಜಗನ್ ಇದೀಗ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಫೋಟೋವನ್ನೂ ಹಾಕಿಕೊಂಡಿದ್ದಾರೆ.

ತುಂಬಾ ದಿನಗಳ ನಂತರ ರಿಲ್ಯಾಕ್ಸ್ ಆಗಿದ್ದೇನೆ. ಪ್ರವಾಸ ಹೋಗುತ್ತಿದ್ದೇನೆ ಎಂದು ಜಗನ್ ಹೇಳಿಕೊಂಡಿದ್ದಾರೆ. ಆದರೆ ಎಲ್ಲಿಗೆ ಎಂದು ಬಹಿರಂಗಪಡಿಸಿಲ್ಲ. ದುಬೈಯಲ್ಲಿರುವ ಸ್ನೇಹಿತೆಯನ್ನು ನೋಡಿಕೊಂಡು ಬರಲು ಹೋಗಿದ್ದೀರಾ ಎಂದು ಅಭಿಮಾನಿಯೊಬ್ಬರು ಕಾಲೆಳೆದಿದ್ದಾರೆ. ಆದರೆ ಇದಕ್ಕೆ ಜಗನ್ ಉತ್ತರಿಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ