ಬಿಗ್ ಬಾಸ್ ಕನ್ನಡ ಹೆಸರಲ್ಲಿ ಮೋಸ ಹೋಗಬೇಡಿ: ಕಲರ್ಸ್ ವಾಹನಿ ಎಚ್ಚರಿಕೆ

ಗುರುವಾರ, 21 ಜುಲೈ 2022 (09:10 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಇದಕ್ಕೆ ತಯಾರಿ ಈಗಾಗಲೇ ಆರಂಭವಾಗಿದೆ.

ಇದರ ಬೆನ್ನಲ್ಲೇ ಬಿಗ್ ಬಾಸ್ ಶೋಗೆ ಸ್ಪರ್ಧಿಗಳು ಯಾರಿರಬಹುದು ಎಂಬ ಚರ್ಚೆಗಳು ಶುರುವಾಗಿದೆ. ಹೀಗಾಗಿ ಬಿಗ್ ಬಾಸ್ ಹೆಸರಲ್ಲಿ ವಂಚನೆಗಳೂ ನಡೆಯುವುದು ಸಾಮಾನ್ಯ. ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಗೆ ಎಂಟ್ರಿ ಕೊಡಲು ಕೆಲವರು ವಾಹಿನಿ ಹೆಸರಲ್ಲಿ ವಂಚನೆ ಮಾಡುತ್ತಾರೆ. ಈ ಬಗ್ಗೆ ಈಗ ಕಲರ್ಸ್ ವಾಹಿನಿ ಸ್ಪಷ್ಟನೆ ನೀಡಿದೆ.

‘ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆ ಕೇವಲ ಕಲರ್ಸ್ ವಾಹಿನಿಯದ್ದಾಗಿರುತ್ತದೆ ಹೊರತು ಯಾವುದೇ ಖಾಸಗಿ ವ್ಯಕ್ತಿಗಳಿಗಲ್ಲ. ಈ ಸಂಬಂಧ ಯಾವುದೇ ಆಡಿಷನ್ ಕೂಡಾ ನಡೆಯಲ್ಲ. ಬಿಗ್ ಬಾಸ್ ಮನೆಗೆ ಹೋಗುವ ಭರವಸೆ ನೀಡಿ ನಿಮ್ಮಿಂದ ಯಾರಾದರೂ ಹಣ ಕೇಳಿದರೆ ತಕ್ಷಣ ಪೊಲೀಸರಿಗೆ ದೂರು ನೀಡಬೇಕು. ಕಲರ್ಸ್ ವಾಹಿನಿ ಬಿಗ್ ಬಾಸ್ ಶೋಗೆ ಆಯ್ಕೆ ಮಾಡಲು ಅಥವಾ ತರಬೇತಿ ಹೆಸರಲ್ಲಿ ಹಣ ಪಡೆಯುವುದಿಲ್ಲ. ಬಿಗ್ ಬಾಸ್ ಪ್ರಕಟಣೆಗೆ ಕೇವಲ ಕಲರ್ಸ್ ವಾಹಿನಿ ಅಥವಾ ವೂಟ್ ಆಪ್ ಸೋಷಿಯಲ್ ಮೀಡಿಯಾ ಖಾತೆಗಳನ್ನು ಮಾತ್ರ ಪರಿಗಣಿಸಿ’ ಎಂದು ಕಲರ್ಸ್ ವಾಹಿನಿ ಪ್ರಕಟಣೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ