ಸೂಪರ್ ಚಾನಲ್‍ನಲ್ಲಿ ಕಾಮಿಡಿ ಶೋ ಮಜಾಭಾರತ

ಶನಿವಾರ, 4 ಫೆಬ್ರವರಿ 2017 (12:10 IST)
ವಯಾಕಾಮ್18 ಸಂಸ್ಥೆಯಡಿಯಲ್ಲಿ ಪ್ರಾರಂಭವಾದ ಮತ್ತೊಂದು ಕನ್ನಡ ಚಾನೆಲ್ ಸೂಪರ್ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಬಿಗ್‍ಬಾಸ್ ಸೀಸನ್4 ಕೊನೆಯ ಎರಡು ವಾರಗಳು ಪ್ರಸಾರ ಮಾಡಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದೆ. ಸೂಪರ್ ಚಾನೆಲ್‍ನಲ್ಲಿ ಈಗ ಹೊಸ ಕಾರ್ಯಕ್ರಮಗಳ ಸಾಲೇ ತಯಾರಾಗುತ್ತಿದೆ. `ಮಜಾಭಾರತ' ಇದೇ ಫೆಬ್ರವರಿ 6 ರಿಂದ ರಾತ್ರಿ 9 ಗಂಟೆಗೆ ಸೋಮವಾರದಿಂದ ಬುಧವಾರದವರೆಗೆ ಪ್ರಸಾರವಾಗಲಿದೆ.
 
ಮಜಾಭಾರತ ಹೇಸರೇ ಹೇಳುವಂತೆ ನಕ್ಕು ನಗಿಸುವ ಕಾರ್ಯಕ್ರಮ. ಯಾಂತ್ರಿಕ ಜಗತ್ತಿನಲ್ಲಿ, ಗಡಿಬಿಡಿಯ ಜೀವನ ಸಾಗಿಸುತ್ತಾ ನಗುವನ್ನೇ ಮರೆತು ಬ್ಯುಸಿ ಲೈಫ್‍ನಲ್ಲೇ ಮುಳುಗಿದ್ದೇವೆ. ಇಡೀ ದಿನದ ಒತ್ತಡದಿಂದ ಹೊರಬರುವಂತೆ ಮಾಡುವ ಉದ್ದೇಶದಿಂದ ಕಿರುತೆರೆಗೆ ಪರಿಚಯಿಸುತ್ತಿರುವ ಹೊಚ್ಚ ಹೊಸ ಕಾರ್ಯಕ್ರಮ ಮಜಾಭಾರತ. 
 
ಇದು ವಾರದ ಮೂರು ದಿನಗಳು ಸೋಮವಾರ, ಮಂಗಳವಾರ ಮತ್ತು ಬುಧವಾರದಂದು ಸೂಪರ್ ಚಾನೆಲ್‍ನಲ್ಲಿ ಪ್ರಸಾರವಾಗಲಿದೆ. ಕಾಮಿಡಿ ಶೋ ಮಜಾಭಾರತ ಕಾರ್ಯಕ್ರಮ ಪ್ರಾರಂಭಿಸುವ ಮೊದಲು ಕರ್ನಾಟಕದಾದ್ಯಂತ ಹಾಸ್ಯ ಪ್ರತಿಭೆಗಳಿಗಳಿಗಾಗಿ ಅನ್ವೇಷಣೆ ನಡೆಸಿ 24 ಜನರನ್ನು ಆಯ್ಕೆ ಮಾಡಿ ಅವರನ್ನು 6 ತಂಡಗಳಾಗಿ ವಿಂಗಡಿಸಲಾಗಿದೆ. ಹಾಸ್ಯದ ವಿಭಿನ್ನ ಪ್ರಾಕಾರಗಳನ್ನು ವೀಕ್ಷಕರಿಗೆ ಉಣಬಡಿಸುವ ಕಾರ್ಯಕ್ರಮ ಇದಾಗಿದೆ. 
 
ಕರಾವಳಿಯ ಚೆಲುವೆ ಶೀತಲ್‍ಶೆಟ್ಟಿ ಹಾಗೂ ಮಾತಿನ ಮಾಂತ್ರಿಕ ನಿರಂಜನ್ ದೇಶಪಾಂಡೆ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಕನ್ನಡದ ಪ್ರಖ್ಯಾತ ಬಹುಭಾಷಾ ನಟಿ ಶ್ರುತಿ ಹಾಗೂ ನಟ-ನಿರ್ದೇಶಕ, ಕಲಾಸಾಮ್ರಾಟ್ ಎಸ್.ನಾರಾಯಣ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
 
ಕಲರ್ಸ್ ಕನ್ನಡ ಹಾಗೂ ಸೂಪರ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳುವಂತೆ, "ಇತ್ತೀಚೆಗಷ್ಟೇ ಪ್ರಾರಂಭವಾದ ಸೂಪರ್ ವಾಹಿನಿಯು ಬೆಳವಣಿಗೆಯ ಹಂತದಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ. ಬಿಗ್‍ಬಾಸ್ ಸೀಸನ್ 4 ರ ಕೊನೆಯ ಎರಡು ವಾರಗಳನ್ನು ಪ್ರಸಾರ ಮಾಡಿದ್ದು ವೀಕ್ಷಕರನ್ನು ಹೆಚ್ಚಿಸಿದೆ. 
 
ಮಜಾಭಾರತ ಕಾರ್ಯಕ್ರಮದ ಮೂಲಕ ನಾವು ಹೊಸ ಪ್ರಕಾರದ ಕಾರ್ಯಕ್ರಮವನ್ನು ಸೂಪರ್‍ನಲ್ಲಿ ಪರಿಚಯಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ. ಮಜಾಭಾರತ ಕಾರ್ಯಕ್ರವನ್ನು ವೀಕ್ಷಕರು ನಗುತ್ತಲೇ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ನಮ್ಮದು ಎಂದರು." 
 
ಸೂಪರ್ ವಾಹಿನಿಯ ಪ್ರೋಗ್ರಾಮಿಂಗ್ ಹೆಡ್, ವೈಷ್ಣವಿ ಹೆಚ್.ಎಸ್. ಹೇಳುವಂತೆ "ಸೂಪರ್ ಚಾನೆಲ್ ಲಾಂಚ್‍ನಲ್ಲೇ ನಮಗಿದ್ದ ಕಮಿಟ್ಮೆಂಟ್ ಭಿನ್ನ ಭಿನ್ನ ಶೈಲಿಯ ಕಾರ್ಯಕ್ರಮಗಳನ್ನು ಕೊಡುವುದಾಗಿತ್ತು. ಅದರಂತೆಯೆ ಪೌರಾಣಿಕ ಕತೆ, ರೋಮ್ಯಾಂಟಿಕ್ ಕಾಮಿಡಿ ಸ್ಟೋರಿ ಹೀಗೆ ವೈವಿಧ್ಯವಾದ ಕಥಾವಸ್ತುಗಳನ್ನು ನೀಡುತ್ತಾ ಬಂದಿದ್ದೇವೆ ಮತ್ತು ಅವು ವೀಕ್ಷಕರ ಮನದಾಳ ತಲುಪಿವೆ. 
 
ಮಜಾಭಾರತಕ್ಕೆ ನಮ್ಮ ತಂಡ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ನಮಗೆ ಅತ್ಯುತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಮಜಾಭಾರತ ವೀಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ ಹಾಗೂ ತನ್ನ ವೈಶಿಷ್ಟ್ಯತೆಯ ಛಾಪು ಮೂಡಿಸುವ ಬಗ್ಗೆ ನಮಗೆ ಅಪಾರ ನಂಬಿಕೆ ಇದೆ ಎಂದರು." ಸೂಪರ್ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಿಸ್ ಮಾಡದೇ ಟ್ಯೂನ್ ಮಾಡಿ ಸೂಪರ್ ಚಾನೆಲ್ ಫೆಬ್ರವರಿ 6 ರಿಂದ ರಾತ್ರಿ 9 ಗಂಟೆಗೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ