ಮಹಾದೇವ “ವಿಷಕಂಠನಾದ” ರೋಚಕ ಕಥೆ

ಬುಧವಾರ, 18 ಜನವರಿ 2017 (10:22 IST)
ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ ಹರ ಹರ ಮಹಾದೇವ ಧಾರಾವಾಹಿಯು ಮತ್ತೊಂದು ರೋಚಕ ಘಟ್ಟ ತಲುಪುತ್ತಿದೆ. ಬಲಿ ಹಾಗು ಇಂದ್ರನ ನಡುವೆ ನಡೆದ ಹೊಡೆದಾಟದಲ್ಲಿ ಅಮೃತ ಕಲಶವೂ ಮಹಾಸಾಗಾರಕ್ಕೆ ಬೀಳುತ್ತದೆ. ಅಮೃತವಿಲ್ಲದೆ ದೇವತೆಗಳೆಲ್ಲ ನಿತ್ರಾಣರಾಗುತ್ತಾರೆ. 
 
ಎಲ್ಲರು ಮಹಾದೇವನ ಬಳಿ ಹೋದಾಗ ಮಹಾದೇವ ಅಮೃತ ಮಂಥನವಾಗಬೇಕೆಂದೂ ಮತ್ತು ಅದನ್ನು ಸುರಾಸುರರು ಸೇರೆ ನಡೆಸಬೇಕೆಂದು ಹೇಳುತ್ತಾರೆ. ಅದರಂತೆ ವಾಸುಕಿಯು ಹಗ್ಗವಾಗುತ್ತಾರೆ ಮತ್ತು ಮಂದಾರ ಪರ್ವತವೂ ಕಡಗೋಲು ಸುರಾಸುರರು ಎರಡು ಬದಿಯಿಂದ ಮಂಥನ ಶುರುಮಾಡುತ್ತಾರೆ. 
 
ಇಂದ್ರನ ಅವಿವೇಕತನದಿಂದಾಗಿ ಮೊದಲು ವಿಷದ ಉತ್ಪತ್ತಿಯಾಗಲು ಎಲ್ಲರು ಕಂಗಾಲಾಗುತ್ತಾರೆ. ನಂತರ ಲೋಕವನ್ನು ವಿಷದಿಂದ ರಕ್ಷಿಸಲು ಮಹಾದೇವ ಇಡೀಯ ವಿಷವನ್ನು ಸೇವಿಸುತ್ತಾರೆ. ಆದರೆ ಪತಿದೇವನ ದೇಹದಲ್ಲಿ ವಿಷ ಸೇರದಿರಲೆಂಬ ಕಾರಣಕ್ಕೆ ಪಾರ್ವತಿಯು ಮಹಾದೇವನ ಕುತ್ತಿಗೆಯನ್ನು ಬಿಗಿದು ಹಿಡಿಯುತ್ತಾಳೆ. 
 
ಈ ರೀತಿಸಮುದ್ರ ಮಂಥನದಿಂದ ಮಹಾದೇವನಿಗೆ ವಿಷಕಂಠ ಅಥವ ನೀಲಕಂಠ ಎಂಬ ಹೆಸರು ಅನ್ವರ್ಥವಾಗಿದೆ. ಮಹಾದೇವ ವಿಷಕಂಠನಾದ ರೋಮಾಂಚಕಾರಿ ಸಮುದ್ರ  ಮಂಥನದ ವಿಶೇಷ ಸಂಚಿಕೆಗಳು ಇದೇ 21-01-2017 ರಿಂದ ಪ್ರಾರಂಭವಾಗಿ ವಾರ ಪೂರ್ತಿ ಪ್ರಸಾರವಾಗುತ್ತದೆ. 
 
ಮಹಾದೇವನ ಈ ಮಹಾ ಮಹಿಮೆಯನ್ನು ವೀಕ್ಷಕರು ಸೋಮವಾರದಿಂದ ಶನಿವಾರದವರೆಗೆ ರಾತಿ 7.30ಕ್ಕೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ