ರಾಗಿಣಿ ಕಾಮೆಂಟಿಗೆ ರಾಂಗ್ ಆದ ಹುಚ್ಚ ವೆಂಕಟ್

ಶುಕ್ರವಾರ, 10 ಫೆಬ್ರವರಿ 2017 (12:52 IST)
ಈ ಹುಚ್ಚ ವೆಂಕಟ್ ಟಿವಿ ವಾಹಿನಿಗಳ ಟಿಆರ್‌ಪಿ ಏರಿಸುವ ಆಸಾಮಿ ಎಂದು ವಾಹಿನಿಗಳು ಭ್ರಮಿಸಿದಂತಿದೆ. ಅದು ಕೆಲವೊಂದು ಸಲ ನಿಜವೂ ಆಗಿರಬಹುದು. ಆದರೆ ಹುಚ್ಚ ವೆಂಕಟ್ ಎಲ್ಲೂ ಸರಿಯಾಗಿ ನಿಲ್ಲದೆ ಏನೋ ಒಂದು ಕಿರಿಕಿರಿ ಮಾಡಿಕೊಳ್ಳುತ್ತಲೇ ಬಂದಿದ್ದಾನೆ.
 
ಇದೆಲ್ಲಾ ಗೊತ್ತಿದ್ದು ಸ್ಟಾರ್ ಸುವರ್ಣ ವಾಹಿನಿ ಸೂಪರ್ ಜೋಡಿ ಸೀಸನ್ 2ನಲ್ಲಿ ಕುಣಿಯುವ ಚಾನ್ಸ್ ಕೊಟ್ಟಿತು. ಹುಚ್ಚ ವೆಂಕಟ್ ಡ್ಯಾನ್ಸ್ ಮಾಡ್ತಾನೆ ಎಂದರೆ ಯಾರಿಗೆ ತಾನೆ ನಗು ಬರಲ್ಲ ಹೇಳಿ. ಈತನ ಲಂಗು ಲಂಗಾಮಿಲ್ಲದ ಕುಣಿತಕ್ಕೆ ಶೋನ ತೀರ್ಪುಗಾರರು ತಲೆಸುತ್ತಿ ಬೀಳುವುದೊಂದು ಬಾಕಿ ಇತ್ತು.
 
ಶೋನ ಸೆಲೆಬ್ರಿಟಿ ಜಡ್ಜ್ ಆಗಿದ್ದ ರಾಗಿಣಿ ದ್ವಿವೇದಿ, ಹುಚ್ಚ ವೆಂಕಟ್ ಫರ್ಮಾನೆನ್ಸ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೇ ಈವಯ್ಯ ಕೋಪ ಮಾಡಿಕೊಂಡು ಶೋನಿಂದ ಅರ್ಧದಲ್ಲೇ ಹೊರನಡೆದ ಘಟನೆ ನಡೆದಿದೆ.  ಆ ಕಂತುಗಳು ಈ ವಾರಾಂತ್ಯದ ಸಂಚಿಕೆಗಳಲ್ಲಿ ನೋಡಿ ಆನಂದಿಸಿ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ