ಜಗ್ಗೇಶ್ ಈಗ ಸರಿಗಮಪ ಲಿಟಲ್ ಚಾಂಪ್ಸ್ ಜ್ಞಾನೇಶನ ಫ್ಯಾನ್!

ಗುರುವಾರ, 18 ಜನವರಿ 2018 (08:39 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪಿಯನ್ ಕಾರ್ಯಕ್ರಮದ ಸ್ಪರ್ಧಿ 10 ವರ್ಷದ ಜ್ಞಾನೇಶನ ಅಭಿಮಾನಿಯಾಗಿಬಿಟ್ಟಿದ್ದಾರೆ!
 

ಜ್ಞಾನೇಶನ ಬಡತನದ ಕತೆ ಕೇಳಿ ಕಳೆದ ವಾರವೇ ಕನ್ನಡಿಗರು ಕಣ್ಣೀರು ಹಾಕಿದ್ದರು. ಪುಟ್ಟ ಪೋರನ ಹಾಡಿಗೆ ಇಡೀ ಕರುನಾಡೇ ತಲೆದೂಗಿತ್ತು. ಇದೀಗ ಜಗ್ಗೇಶ್ ತಮ್ಮ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೂಟಿಂಗ್ ನಡುವೆ ಜ್ಞಾನೇಶನನ್ನು ಭೇಟಿಯಾಗಿ ಆತನ ಬಗ್ಗೆ ಹೊಗಳಿದ್ದಾರೆ.

ತಮ್ಮ ಕಾರ್ ವ್ಯಾನ್ ಗೆ ಜ್ಞಾನೇಶನನ್ನು ಕರೆಸಿಕೊಂಡ ಜಗ್ಗೇಶ್, ಜ್ಞಾನೇಶನ ಜತೆಗೆ ವಿಡಿಯೋ ಮಾಡಿ, ಹಾಡು ಹಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ನಿನ್ನ ದೊಡ್ಡ ಅಭಿಮಾನಿ ಎಂದ ಜಗ್ಗೇಶ್, ಹಾಡು ಮತ್ತು ಓದಿನ ಕಡೆಗೆ ಗಮನ ಕೊಡು ಎಂದು ಹಾರೈಸಿದರು. ಆಡುವ ವಯಸ್ಸಲ್ಲಿ ಇಷ್ಟೊಂದು ಸಾಧನೆ ಮಾಡಿದ್ದೀಯಾ ನೀನು ನಿಜಕ್ಕೂ ಗ್ರೇಟ್ ಕಣೋ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ