ಜೊತೆ ಜೊತೆಯಲಿ ಧಾರವಾಹಿಯ ಕಸ ವಿಲೇವಾರಿ ಸಂದೇಶ ಮಾಡಿದ ಮ್ಯಾಜಿಕ್ ಏನು ಗೊತ್ತಾ?!

ಮಂಗಳವಾರ, 25 ಫೆಬ್ರವರಿ 2020 (09:12 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಹೊಸ ಸೆನ್ಸೇಷನ್ ಹುಟ್ಟು ಹಾಕಿದೆ. ಈ ಧಾರವಾಹಿಯಲ್ಲಿ ಇತ್ತೀಚೆಗೆ ಕಸ ವಿಲೇವಾರಿ ಬಗ್ಗೆ ವಿಶೇಷವಾಗಿ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು.


ಕಸ ವಿಂಗಡಿಸಿ ನೀಡುವುದರ ಮಹತ್ವವನ್ನು ನಾಯಕ ಪಾತ್ರಧಾರಿ ಆರ್ಯವರ್ಧನ್ ವಿವರಿಸುವ ದೃಶ‍್ಯ ಮೂಡಿಬಂದಿತ್ತು. ಈ ದೃಶ‍್ಯ ಅದೆಷ್ಟೋ ಜನರಿಗೆ ಪ್ರಭಾವ ಬೀರಿದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.

ಈ ಧಾರವಾಹಿಯಲ್ಲಿ ನೀಡಿದ ಸಂದೇಶದಿಂದಾಗಿ ಮೈಸೂರಿನಲ್ಲಿ ಕಸ ವಿಂಗಡನೆ ಮಾಡಿ ನೀಡುವುದರಲ್ಲಿ ಇದುವರೆಗೆ ಉಡಾಫೆ ಮಾಡುತ್ತಿದ್ದ ನಾಗರಿಕರು ಈಗ ಎಚ್ಚೆತ್ತುಕೊಂಡಿದ್ದು ಶೇ. 20 ರಷ್ಟು ಈ ನಿಟ್ಟಿನಲ್ಲಿ ಪ್ರಗತಿ ಕಂಡಿದ್ದೇವೆ ಎಂದು ಸ್ವತಃ ಮೈಸೂರು ನಗರ ಪಾಲಿಕೆ ಇಂಜಿನಿಯರ್ ಹೇಳಿಕೊಂಡಿರುವುದಾಗಿ ಧಾರವಾಹಿ ತಂಡ ಹೇಳಿದೆ. ಒಂದು ಧಾರವಾಹಿ ನೀಡಿದ ಸಂದೇಶದಿಂದ ಇಷ್ಟೊಂದು ಬದಲಾವಣೆ ಆಗಿದೆ ಎಂದರೆ ನಿಜಕ್ಕೂ ಶ್ಲಾಘನೀಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ