ಸುದೀಪ್ ಅವರಲ್ಲೂ ಒಬ್ಬ ಒಳ್ಳೆ ಅಡುಗೆ ಭಟ್ರಿದ್ದಾರೆ ಅಂತ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಸುದೀಪ್ ಅವ್ರು ಸ್ವತಃ ತಾವೇ ಬಿಗ್‍ಬಾಸ್ ಸೆಟ್ಟಲ್ಲಿ ಎಲ್ಲರಿಗೂ ಅವರವರ ಇಷ್ಟದ ಅಡುಗೆ ಮಾಡಿ, ಅದನ್ನು ನೀಟಾಗಿ ಪ್ಯಾಕು ಮಾಡಿಸಿ ಪ್ರತಿಯೊಂದರ ಮೇಲೆಯೂ ಆಯಾ ಸ್ಪರ್ಧಿಗಳ ಹೆಸರು ಬರೆದು ಕಳಿಸಿದ್ದಾರೆ.
ಅವರು ಏನೆಲ್ಲಾ ಮಾಡಿದ್ದಾರೆ ಅಂತ ತಿಳಿದುಕೊಂಡ್ರೆ ಬಹುಶಃ ಸುದೀಪ್ ಮನೆಯವರೂ ಛೇ ಎಂಥಾ ಛಾನ್ಸ್ ಮಿಸ್ ಆದ್ವಲ್ಲಾ ಅಂದುಕೊಳ್ತಾರೆ. ವೆಜ್ ಬಿರಿಯಾನಿ, ಚಿಕನ್ ಬಿರಿಯಾನಿ, ಮಂಗಳೂರು ಬಜ್ಜಿ, ಚಿಲ್ಲಿ ಪನೀರ್, ಚಿಕನ್ ಅಪ್ರಿಕಾರ್ಟ್, ಚೀಸ್ ಎಗ್, ಇದರ ಜೊತೆಗೆ ಮಾರ್ಬಲ್ ಕೇಕ್ ಕೂಡ ಮಾಡಿ ಕಳುಹಿಸಿದ್ದಾರೆ. ಈ ಮೂಲಕ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುದೀಪ್ ಕೈರುಚಿ ನೋಡುವ ಸೌಭಾಗ್ಯ ಸಿಕ್ಕಿದೆ.