‘ಪುಟ್ಟಗೌರಿ’ ರಂಜಿನಿ ರಾಘವನ್ ಧಾರವಾಹಿಗೆ ಖ್ಯಾತ ನಟನ ಪುನರಾಗಮನ
ನವೀನ್ ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಶ್ರೀರಸ್ತು ಶುಭಮಸ್ತು’ ಧಾರವಾಹಿಯ ಹೀರೋ ಆಗಿ ಅಭಿನಯಿಸಿದ್ದರು. ಅದಾದ ಬಳಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದ ನವೀನ್ ಕೆಲವು ದಿನ ಕಿರುತೆರೆಯಿಂದ ದೂರವಿದ್ದರು. ಇದೀಗ ಮತ್ತೆ ಮರಳಿ ಬರುತ್ತಿದ್ದಾರೆ. ನವೀನ್ ಪುನರಾಗಮನಕ್ಕೆ ಪ್ರೇಕ್ಷಕರು ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.