ವೀಕೆಂಡ್ ವಿತ್ ರಮೇಶ್ ನ ಮೂರನೇ ಅತಿಥಿ ಹೆಸರು ನೋಡಿ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ

ಬುಧವಾರ, 1 ಮೇ 2019 (08:42 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎರಡು ವಾರ ಎರಡು ಅತಿಥಿಗಳೊಂದಿಗೆ ಮುಗಿದಿದ್ದು, ಇದೀಗ ಮೂರನೇ ಅತಿಥಿ ಹೆಸರು ಬಹಿರಂಗಗೊಂಡಿದೆ.


ಆದರೆ ಮೂರನೇ ಅತಿಥಿ ಹೆಸರು ನೋಡಿ ಪ್ರೇಕ್ಷಕರು ಮತ್ತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಖುಷಿಯಾಗಿದ್ದಾರೆ. ಅಷ್ಟಕ್ಕೂ ಮೂರನೇ ಅತಿಥಿ ಯಾರು ಗೊತ್ತಾ? ನಾಯಕಿ ನಟಿ ಪ್ರೇಮಾ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ನಂ.1 ನಟಿಯಾಗಿ ಮೆರೆದಿದ್ದ ಪ್ರೇಮಾ ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ. ಆದರೆ ಪ್ರೇಮಾ ಹೆಸರು ಕೇಳಿದೊಡನೆ ಕೆಲವರು ಹಳೆಯ ನಟಿಯನ್ನು ಗುರುತಿಸಿರುವುದಕ್ಕೆ ಖುಷಿ ವ್ಯಕ್ತಪಡಿಸಿದರೆ ಇನ್ನು ಕೆಲವರು ಸಿನಿಮಾದವರು ಬಿಟ್ಟು ಬೇರೆಯವರು ನಿಮಗೆ ಸಾಧಕರ ಹಾಗೆ ಕಾಣಲ್ವಾ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ರಾಘವೇಂದ್ರ ರಾಜ್ ಕುಮಾರ್ ಎಪಿಸೋಡ್ ಬಗ್ಗೆಯೂ ಜನ ಹೀಗೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇನೇ ಇದ್ದರೂ ಈ ವಾರ ನಮ್ಮೂರ ಮಂದಾರ ಹೂವೇ ನಟಿಯ ಜೀವನ ಕತೆಯನ್ನು ಕೇಳಲು ರೆಡಿಯಾಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ