ಸೀಕ್ರೆಟ್ ಆಗಿ ಸಾನ್ಯಾರನ್ನು ಮದುವೆಯಾದರಾ ರೂಪೇಶ್ ಶೆಟ್ಟಿ?!

ಸೋಮವಾರ, 23 ಜನವರಿ 2023 (09:00 IST)
WD
ಬೆಂಗಳೂರು: ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ನೇಹಿತರಾಗಿದ್ದ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎಂಬುದು ಎಲ್ಲರ ಅನುಮಾನ.

ಶೋನಲ್ಲೂ ಇಬ್ಬರೂ ಜೊತೆಯಾಗಿಯೇ ಇದ್ದರು. ಈ ಜೋಡಿಯನ್ನು ಸುದೀಪ್ ಕೂಡಾ ಕಾಲೆಳೆಯುತ್ತಲೇ ಇದ್ದರು. ಮನೆಯಿಂದ ಹೊರಬಂದ ಮೇಲೂ ಇಬ್ಬರೂ ಮೊದಲಿನಂತೇ ಜೊತೆಯಾಗಿಯೇ ಇದ್ದಾರೆ.

ಈ ನಡುವೆ ಸಾನ್ಯಾ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಇತ್ತೀಚೆಗಿನ ಫೋಟೋ ಶೂಟ್ ನ ವಿಡಿಯೋ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಸಾನ್ಯಾ ಅಯ್ಯರ್ ತೊಟ್ಟಿರುವ ಉಂಗುರ ಎಲ್ಲರ ಗಮನ ಸೆಳೆಯುತ್ತಿದೆ. ವಿ ಶೇಪ್ ನ ಈ ಉಂಗುರವನ್ನು ಶೆಟ್ಟರ ಸಂಪ್ರದಾಯದಂತೆ ಮದುವೆ ಬಳಿಕ ಧರಿಸುತ್ತಾರೆ. ಸಾನ್ಯಾ ಈ ಉಂಗುರ ಧರಿಸಿರುವುದರಿಂದ ರೂಪೇಶ್ ಜೊತೆ ಸೀಕ್ರೆಟ್ ಆಗಿ ಮದುವೆಯಾದಾರಾ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ