ಜೀ ಕನ್ನಡವಾಹಿನಿ ಸದಾ ಹೊಸತನದ ರಿಯಾಲಿಟಿ ಶೋಗಳನ್ನು ನಡೆಸಿ, ಕನ್ನಡಿಗರ ಮುಂದಿಟ್ಟು ಕನ್ನಡ ಕಿರುತೆರೆಗೆ ಮೆರಗು ನೀಡುತ್ತಲೇ ಬರುತ್ತಿದೆ. ವಾಹಿನಿ ವೀಕ್ಷಕರನ್ನು ನಿರಂತರ ಹಾಸ್ಯದ ಅಲೆಯೊಳಗೆ ತೇಲಿಸಿ, ಮಕ್ಕಳನ್ನು ವೇದಿಕೆಗೇರಿಸಿ ಮನ ಮಿಡಿವ ಕಾರ್ಯಕ್ರಮಗಳನ್ನು ರೂಪಿಸಿ, ಸಂಗೀತಸುಧೆಯನ್ನೇ ಒದಗಿಸಿ ರಂಜಿಸಿದೆ.
ಮನರಂಜನೆಯೊಟ್ಟಿಗೇ ಮೌಲ್ಯಯುತ ಕಾರ್ಯಕ್ರಮಗಳನ್ನೂ ನೀಡಿದೆ. ಪ್ರಸ್ತುತ, ಸಂಗೀತ ಪ್ರೇಮಿಗಳೆಲ್ಲಾ ಕಾತುರದಿಂದ ವೀಕ್ಷಿಸುತ್ತಿದ್ದ ಜೀ ಕನ್ನಡ ವಾಹಿನಿಯ ಸರೀಗಮಪ ಸೀಸನ್ 12 ಕಾರ್ಯಕ್ರಮ ಫಿನಾಲೆ ಹಂತಕ್ಕೆ ಬಂದು ತಲುಪಿದೆ.
ಸರಿಗಮಪ ಸೀಸನ್ 12ರ ಮೂಲಕ ಮುಗ್ಧ ಮಕ್ಕಳ ಧ್ವನಿಯಲ್ಲಿ ಚೆಂದದ ಗೀತೆಗಳನ್ನು ಹಾಡಿಸಿ ಸಂಗೀತ ಪ್ರಿಯರ ಮುಂದಿಟ್ಟ ವಾಹಿನಿ, ಹಾಸನದಲ್ಲಿ ಬೃಹತ್ ಜನಸ್ತೋಮದ ಮಧ್ಯ ಅದ್ಧೂರಿ ಫಿನಾಲೆಯನ್ನು ನಡೆಸಿದೆ. ಶೋ ಶುರುವಾತಿನಿಂದಲೂ ತಮ್ಮದೇ ಆದ ವಿಶಿಷ್ಟ ಕಂಠಸಿರಿಯಿಂದ ಎಲ್ಲಮಕ್ಕಳು ವೀಕ್ಷಕರಿಗೆ ಹತ್ತಿರವಾಗುತ್ತಲೇ ಬಂದಿದ್ದಾರೆ.
ಎಲ್ಲ ಮಕ್ಕಳಲ್ಲಿ ಫಿನಾಲೆಗೆ ಆಯ್ಕೆಯಾದದ್ದು 6 ಜನ. ಅನ್ವಿತಾ, ವೇಣುಗೋಪಾಲ್, ಆಸ್ತಾ, ದರ್ಶನ್, ವೈಶ್ಣವಿ, ಶ್ರೀಕರ್ ಒಟ್ಟು 6 ಮಕ್ಕಳು ವೇದಿಕೆ ಏರಿಹಾಡಿದ್ದಾರೆ. ಈ ಎಲ್ಲ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಹಾಗುರುಗಳಾಗಿ ಆಗಮಿಸಿದ ಹಂಸಲೇಖ ಮಕ್ಕಳ ಪ್ರತಿಭೆಯನ್ನು ಕೊಂಡಾಡಿ ಮೆಚ್ಚಿಕೊಂಡಿದ್ದು ವಿಶೇಷ.
ಸರೆಗಮಪ ಕಾರ್ಯಕ್ರಮದ ಯಶಸ್ವಿ ನಿರ್ಣಾಯಕರಾದ ಅರ್ಜುನ್ ಜನ್ಯ, ವಿಜಯಪ್ರಕಾಶ್, ರಾಜೇಶ್ ಕೃಷ್ಣನ್, ಮಕ್ಕಳು ಹಾಡಿದ ಗೀತೆಗಳನ್ನು ಮೆಚ್ಚಿಕೊಂಡು ವೇದಿಕೆಯ ಮೇಲೆ ಮಕ್ಕಳೊಟ್ಟಿಗೆ ತಾವೂ ಧ್ವನಿಗೂಡಿಸಿ ಮತ್ತಷ್ಟು ಮೆರಗು ತಂದಿದ್ದಾರೆ.
ಫಿನಾಲೆಯ ಮೊದಲನೇ ಸುತ್ತಿನಲ್ಲಿ 6 ಮಕ್ಕಳು ಹಾಡಿದ್ದು, ಎರಡನೇ ಸುತ್ತಿಗೆ ಆಯ್ಕೆಯಾದ 3 ಮಕ್ಕಳಂತೂ ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡಿದ್ದಾರೆ. ಫಿನಾಲೆ ವೇದಿಕೆಗೆ ತಮ್ಮ ಗಾನಸುಧೆಯಿಂದಲೇ ಮೆರಗು ತಂದ ವರುಗಳಲ್ಲಿ ಜೀ ಕನ್ನಡ ಸರೆಗಮಪ ಸೀಸನ್ 12 ರ ವಿನ್ನರ್ಯಾರು ಎಂಬುದು ಫೆಬ್ರವರಿ 18 ಮತ್ತು 19 ರಂದುರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಸರೀಗಮಪ ಲಿಟಲ್ ಚಾಂಪ್ಸ್ ಸೀಸನ್ 12 ರ ಕಾರ್ಯಕ್ರಮದಲ್ಲಿಯೇ ತಿಳಿಯಲಿದೆ.
ಇದೇಕಾರ್ಯಕ್ರಮದಲ್ಲಿ ಡ್ರಾಮಾ ಜ್ಯೂನಿಯರ್ಸ್ ಮಕ್ಕಳು ಮತ್ತು ಕಾಮಿಡಿ ಕಿ ಲಾಡಿಗಳು ಒಟ್ಟಿಗೆ ಜೊತೆಯಾಗಿ ಸ್ಕಿಟ್ ಒಂದರಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರಲಿರುವ ಹೊಸ ಕಥಾಹಂದರವುಳ್ಳ `ಜೋಡಿಹಕ್ಕಿ' ಧಾರಾವಾಹಿಯ ನಾಯಕನಾಯಕಿಯಿಂದ ಸುಂದ ನೃತ್ಯ ವೂವೇದಿಕೆಯ ಮೇಲೆ ಮೂಡಿಬಂದಿದೆ.
ಸರೆಗಮಪ ಲಿಟಲ್ ಚಾಂಪ್ಸ್ ನ ಬೇಬಿಡಾಲ್ ಆದ್ಯ ಮತ್ತು ಮುಗ್ಧ ಧ್ವನಿಯಿಂದಲೇ ಎಲ್ಲರ ಮನಸ್ಸು ಗೆದ್ದ ಪ್ರಕೃತಿ ಒಟ್ಟಿಗೆ ಸೇರಿ ಗೀತೆಯೊಂದಕ್ಕೆ ಧ್ವನಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಮಕ್ಕಳ ವಿಶಿಷ್ಟ ಗಾಯನದೊಂದಿಗೇ ಎಲ್ಲರ ಗಮನಸೆಳೆದ ಸರೆಗಮಪ ಸೀಸನ್ 12 ರ ಫಿನಾಲೆ ಎಲ್ಲ ರೀತಿಯಿಂದಲೂ ವಿಶೇಷವೆನ್ನಿಸುತ್ತಿದೆ. ಸಂಗೀತಸುಧೆಯ ಎಲ್ಲ ವಿಶೇಷಗಳನ್ನು ವೀಕ್ಷಿಸುವುದಕ್ಕೆ, ಸರೆಗಮಪ ಸೀಸನ್ 12 ರ ವಿನ್ನರಯಾರೆಂದು ತಿಳಿಯುವುದಕ್ಕೆ ಫೆಬ್ರವರಿ 18 ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗುವ ಕಾರ್ಯಕ್ರಮಕ್ಕಾಗಿ ಕಾಯಲೇಬೇಕು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.