ಸದ್ಯದಲ್ಲೇ ಕಿಚ್ಚ ಸುದೀಪ್, ಕಲರ್ಸ್ ಕನ್ನಡ ವಾಹಿನಿ ನೀಡಲಿದೆ ಬಿಗ್ ನ್ಯೂಸ್!

ಗುರುವಾರ, 22 ಜೂನ್ 2017 (12:44 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಕಲರ್ಸ್ ಕನ್ನಡ ವಾಹಿನಿಯ ಗುರುದಾಸ್ ಶೆಣೈ ಜತೆಗೆ ಮಹತ್ವದ ಟ್ವಿಟರ್ ಸಂಭಾಷಣೆಯೊಂದು ನಡೆದಿದೆ. ಅದೊಂದು  ‘ಬಿಗ್’ ಸುದ್ದಿಯ ಸುಳಿವು ನೀಡಿದೆ.

 
ಅಷ್ಟಕ್ಕೂ ಆ ಬಿಗ್ ನ್ಯೂಸ್ ಏನು ಗೊತ್ತಾ? ‘ಸದ್ಯದಲ್ಲೇ ಬರುತ್ತಿದ್ದೇವೆ.. ಸೀಸನ್ 5.. ಸಾಕಷ್ಟು ಅಚ್ಚರಿಗಳೊಂದಿಗೆ..’ ಎಂದು ಗುರುದಾಸ್ ಶೆಣೈ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಕೂಡಾ ‘ನಾನೂ ಎದುರು ನೋಡುತ್ತಿದ್ದೇನೆ..’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಲ್ಲಿಗೆ ಇವರಿಬ್ಬರು ಎದುರು ನೋಡುತ್ತಿರುವ ಆ ಸರ್ಪ್ರೈಸ್ ಏನು ಎಂಬ ಸುಳಿವು ಪ್ರೇಕ್ಷಕರಿಗೂ ಸಿಕ್ಕಿದೆ. ಅಂದರೆ ಇವರಿಬ್ಬರೂ ಬಿಗ್ ಬಾಸ್ ಕನ್ನಡ ಸೀಸನ್ 5 ರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಇದುವರೆಗೆ 4 ಸೀಸನ್ ಮುಗಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋ ಕಳೆದ ವರ್ಷವೂ ಇದೇ ಸಮಯದಲ್ಲಿ ಲಾಂಚ್ ಆಗಿತ್ತು. ಇದೀಗ ಮತ್ತೆ ಈ ವರ್ಷದ ಶೋಗೆ ತೆರೆ ಮರೆಯಲ್ಲಿ ತಯಾರಿ ನಡೆಯುತ್ತಿರುವುದು ಪಕ್ಕಾ ಆಗಿದೆ. ಹೆಚ್ಚಿನ ವಿವರಗಳು ಸದ್ಯದಲ್ಲೇ ಲಭ್ಯವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ