ಸ್ಟಾರ್ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಯಾದ ಹರ ಹರ ಮಹಾದೇವ ತನ್ನ 100 ಕಂತುಗಳನ್ನು ಪೂರೈಸಿದ್ದು ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದೆ. ಸತಿ ಶಿವರ ಪ್ರೇಮ ಕಥೆಯಿಂದ ಪ್ರಾರಂಭವಾದ ಈ ಧಾರಾವಾಹಿ, ನಂತರ ಸತಿ ಸ್ವಯಂವರ, ಸತಿ ಮಹಾದೇವರ ವಿವಾಹ, ಸತಿ ದಹನ, ವೀರಭದ್ರನ ಅವತಾರ, ದಕ್ಷನ ಸಂಹಾರ
, ಪಾರ್ವತಿಯ ಉಗಮ , ಪಾರ್ವತಿ ಮಹಾದೇವರ ಪ್ರೇಮ ಕಥೆ ಹೀಗೆ ಮುಂದೊರೆದು ಇದೀಗ ಪಾರ್ವತಿ ಮಹಾದೇವರ ವಿವಾಹದ ನಂತರ ಧಾರಾವಾಹಿಯು ಸುಬ್ರಮಣ್ಯನ ಜನನದ ಮತ್ತೊಂದು ಪ್ರಮುಖ ಘಟ್ಟ ತಲುಪಿದೆ.
ಇದೇ ಶನಿವಾರ ಒಂದು ಘಂಟೆಯ ವಿಶೇಷ ಸಂಚಿಕಯನ್ನು ಸ್ಟಾರ್ ಸುವರ್ಣ ವಾಹಿನಿಯು ಬಿತ್ತರಿಸುತ್ತಿದ್ದು ಇದು, ಕಾರ್ತಿಕೇಯನ ಕುರಿತಾದ ವಿಶೇಷ ದೃಶ್ಯಾವಳಿಗಳುಳ್ಳ ಸಂಚಿಕೆಯಾಗಲಿದೆ. ಈ ವಿಶೇಷ ಸಂಚಿಕೆಯು ಇದೇ ಡಿಸೆಂಬರ್ 17 ರಂದು ರಾತ್ರಿ 7.30ರಿಂದ 8.30 ರವರೆಗೆ ಪ್ರಸಾರವಾಗಲಿದ್ದು ನೋಡುಗರನ್ನು ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡುತ್ತದೆ.