ಕನ್ನಡದ ಕೋಟ್ಯಾಧಿಪತಿಯಲ್ಲಿ ಈ ವಾರ ವಿಶೇಷ ಅತಿಥಿಗಳು

ಬುಧವಾರ, 31 ಜುಲೈ 2019 (09:20 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಈ ವಾರ ಜನ ಸಾಮಾನ್ಯರ ಬದಲಾಗಿ ಸೆಲೆಬ್ರಿಟಿಗಳು ಹಾಟ್ ಸೀಟ್ ನಲ್ಲಿ ಕೂರಲಿದ್ದಾರೆ.


ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಈ ಪಾಪ್ಯುಲರ್ ಕ್ವಿಜ್ ಶೋನಲ್ಲಿ ಈ ವಾರ ಕಲರ್ಸ್ ಕನ್ನಡ ವಾಹಿನಿಯ ಎರಡು ಕುಟುಂಬಗಳು ಪಾಲ್ಗೊಳ್ಳಲಿವೆ.

ಜೆಕೆ, ಕೃಷಿ ತಾಪಂಡ ತೀರ್ಪುಗಾರರಾಗಿ ಅಕುಲ್ ಬಾಲಾಜಿ ನಿರೂಪಕರಾಗಿರುವ ಕಾಮಿಡಿ ಕಂಪನಿ ತಂಡ ಮತ್ತು ಇತ್ತೀಚೆಗಷ್ಟೇ ಆರಂಭವಾದ ರಕ್ಷಾ ಬಂಧನ ಧಾರವಾಹಿಯ ಕಲಾವಿದರು ಈ ವಾರ ಕೋಟ್ಯಾಧಿಪತಿ ಆಡಲಿದ್ದಾರೆ. ಇವರೆಲ್ಲಾ ಪುನೀತ್ ರಾಜ್ ಕುಮಾರ್ ಜತೆ ಮಸ್ತ್ ಮಜಾ ಮಾಡಿಕೊಂಡು ಎಷ್ಟು ಹಣ ಗೆಲ್ಲುತ್ತಾರೆ ಎಂದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ