ಲಾಕ್ ಡೌನ್ ಬಗ್ಗೆ ಬೇಸರ ಹೊರಹಾಕಿದ ಕನ್ನಡ ಕಿರುತೆರೆ ಕಲಾವಿದರು

ಬುಧವಾರ, 12 ಮೇ 2021 (09:08 IST)
ಬೆಂಗಳೂರು: ಕೊರೋನಾಗಾಗಿ ರಾಜ್ಯ ಸರ್ಕಾರವೇನೋ ಎರಡು ಹಂತದಲ್ಲಿ ನಿರಂತರವಾಗಿ ಲಾಕ್ ಡೌನ್ ವಿಧಿಸಿದೆ. ಆದರೆ ಇದರ ಬಗ್ಗೆ ಕಲಾವಿದರಲ್ಲಿ ಅಸಮಾಧಾನವಿದೆ.


ಕೆಲವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮಅಸಮಾಧಾನ ಹೊರಹಾಕುತ್ತಿದ್ದಾರೆ. ಪ್ರತಿನಿತ್ಯ ದುಡಿಯುತ್ತಿದ್ದ ಕಲಾವಿದರಿಗೆ ಈಗ ಲಾಕ್ ಡೌನ್ ನಿರ್ಬಂಧದಿಂದಾಗಿ ಆದಾಯವಿಲ್ಲದಂತಾಗಿದೆ. ಇದರಿಂದಾಗಿ ಕಿರುತೆರೆ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ಹೀಗಾಗಿ ನಟ ಚಂದನ್ ಕುಮಾರ್, ನಟಿ ಅಮೃತಾರಾಮಮೂರ್ತಿ ಸೇರಿದಂತೆ ಹಲವರು ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ. ಇನ್ನೂ ಎಷ್ಟು ದಿನ ಹೀಗಿರಬೇಕು? ನೀವೇನೋ ಲಾಕ್ ಡೌನ್ ಮಾಡಿದಿರಿ ಸ್ವಾಮಿ, ಆದರೆ ಜನ ಸಾಮಾನ್ಯರು ಹೇಗೆ ಬದುಕಬೇಕು ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಹಲವು ಕಾರ್ಮಿಕರು ಕೆಲಸವಿಲ್ಲದೇ ಊಟಕ್ಕೆ ಪರದಾಡುವ ಸ್ಥಿತಿ ಬಂದಿದೆ. ಈಗಿರುವ ಲಾಕ್ ಡೌನ್ ಅವಧಿಯಲ್ಲೇ ಕೊರೋನಾ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಂಡು ಮುಂದೆ ನಿರ್ಬಂಧ ಸಡಿಲಿಸದೇ ಹೋದರೆ ಬಡವರು ಹಸಿವಿನಿಂದ ಸಾಯಬೇಕಾದ ಪರಿಸ್ಥಿತಿ ಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ